ಹುಬ್ಬಳ್ಳಿ : ನವವಿವಾಹಿತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಪೊರೇಟರ್ ಬಂಧನಕ್ಕೆ ಕೋರ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ , ಆರೋಪಿಯನ್ನು ಬಂಧಿಸಿಲು ಪಾಲಿಕೆ ಸಭೆಗೆ ಗೋಕುಲ ರೋಡ್ ಪೊಲೀಸರು ಆಗಮಿಸಿದ್ದರು. ಆದರೆ ಸಭೆಗೆ ಕಾರ್ಪೊರೇಟರ್ ಚೇತನ್ ಹಿರೇಕೆರೂರು ಗೈರಾಗಿದ್ದರಿಂದ ಪೊಲೀಸರು ಬರಿಗೈಯಲ್ಲಿ ಹಿಂದಿರುಗಿದ್ದಾರೆ.
ಸದ್ಯ ನವವಧುವನ್ನು ಅಪಹರಣ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಚೇತನ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪಕ್ಷೇತರ ಸದಸ್ಯನಾಗಿರುವ ಚೇತನ್, ಕಳೆದ ಜೂನ್ 26 ರಿಂದ ನಾಪತ್ತೆಯಾಗಿದ್ದು, ಇಂದು ಪಾಲಿಕೆಯ ಸಾಮಾನ್ಯ ಸಭೆಗೆ ಬರುವ ಮಾಹಿತಿ ಇದ್ದುದರಿಂದ ಗೋಕುಲ್ ರೋಡ್ ಪೊಲೀಸರು ಪಾಲಿಕೆಗೆ ಆಗಮಿಸಿದ್ದರು. ಆದರೆ ಚೇತನ್ ಸಭೆಗೆ ಬಾರದ ಹಿನ್ನೆಲೆ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಓದಿ : ಹುಬ್ಬಳ್ಳಿ ಗಲಭೆ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಧಾರವಾಡ ಹೈಕೋರ್ಟ್