ETV Bharat / state

ರಂಗಭೂಮಿ ಕಲಾವಿದರ ಸಂಕಷ್ಟಕ್ಕೆ ಕಥಾಕರ್ ವೀರ್ ಸಂಸ್ಥೆಯಿಂದ ನೆರವು - ಕಥಾಕರ್ ವೀರ್ ಸಂಸ್ಥೆಯ ಮುಖ್ಯಸ್ಥೆ ಸುಶ್ಮಾ ವೀರ್

ಪ್ರತಿಯೊಬ್ಬರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಳಿ ಪರಿಹಾರ ನೀಡಿ ಎಂದರೆ ಅದು ಸಾಧ್ಯವಿಲ್ಲ. ಹಾಗಾಗಿ, ನಮ್ಮ ಸಂಸ್ಥೆಯಿಂದ ಎಲ್ಲಾ ಜಿಲ್ಲೆಯಲ್ಲಿರುವ ರಂಗ ಭೂಮಿ ಕಲಾವಿದರಿಗೆ ಸಹಾಯ ಹಸ್ತ ಚಾಚಲಾಗಿದೆ..

kathakar veer organization helping artist who suffering from covid
ರಂಗಭೂಮಿ ಕಲಾವಿದರ ಸಂಕಷ್ಟಕ್ಕೆ ಕಥಾಕರ್ ವೀರ್ ಸಂಸ್ಥೆಯಿಂದ ನೆರವು
author img

By

Published : Oct 20, 2020, 5:20 PM IST

ಹುಬ್ಬಳ್ಳಿ: ಕೊವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಂಗಭೂಮಿ ಕಲಾವಿದರಿಗೆ ಹೆಲ್ತ್ ಕಾರ್ಡ್ ಹಾಗೂ ದಿನ ಬಳಕೆಯ ಅಗತ್ಯ ವಸ್ತುಗಳು ಸೇರಿ ಶಿಕ್ಷಣವನ್ನು ಕಥಾಕರ್ ವೀರ್ ಸಂಸ್ಥೆಯಿಂದ ನೀಡಲಾಗುತ್ತಿದೆಯೆಂದು ಸಂಸ್ಥೆಯ ಮುಖ್ಯಸ್ಥೆ ಹಾಗೂ ಕಲಾವಿದೆ ಸುಶ್ಮಾ ವೀರ್ ಹೇಳಿದರು.

ಕಥಾಕರ್ ವೀರ್ ಸಂಸ್ಥೆಯ ಮುಖ್ಯಸ್ಥೆ ಸುಶ್ಮಾ ವೀರ್

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಕಥಾಕರ್ ವೀರ್ ಸಂಸ್ಥೆಯಿಂದ ಸಂಕಷ್ಟಕ್ಕೆ ಸಿಲುಕಿದ ಅದೆಷ್ಟೋ ಕಲಾವಿದರಿಗೆ ಸಹಾಯ ಮಾಡುವ ಮೂಲಕ ಸಾಮಾಜಿಕ ಕಾರ್ಯ ನಿರ್ವಹಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಪ್ರತಿ ಕ್ಷೇತ್ರಗಳಿಗೂ ಸಹ ತೊಂದರೆ ನೀಡಿದೆ. ಪ್ರತಿಯೊಬ್ಬರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಳಿ ಪರಿಹಾರ ನೀಡಿ ಎಂದರೆ ಅದು ಸಾಧ್ಯವಿಲ್ಲ. ಹಾಗಾಗಿ, ನಮ್ಮ ಸಂಸ್ಥೆಯಿಂದ ಎಲ್ಲಾ ಜಿಲ್ಲೆಯಲ್ಲಿರುವ ರಂಗ ಭೂಮಿ ಕಲಾವಿದರಿಗೆ ಸಹಾಯ ಹಸ್ತ ಚಾಚಲಾಗಿದೆಯೆಂದರು.

ಇದೀಗ ಧಾರವಾಡ ಜಿಲ್ಲೆಯಲ್ಲಿರುವ ನೂರಾರು ಬಡ ಕಲಾವಿದರು ಮತ್ತು ನಾಟಕ ನಂಬಿ ಜೀವನ ನಡೆಸುತ್ತಿರುವ ಕಲಾವಿದರಿಗೆ ಸಹಾಯ ಹಾಗೂ ಅವರ ಮಕ್ಕಳ ಜೀವನ ರೂಪಿಸುವ ಉದ್ದೇಶದಿಂದ ಸಹಾಯ ಹಸ್ತ ಚಾಚಿದ್ದೇವೆ ಎಂದು ತಿಳಿಸಿದರು. ಇನ್ನೂ ಸರ್ಕಾರ ನಾಟಕ‌ ಪ್ರದರ್ಶನ ಮಾಡಲು ಅನುಮತಿ ನೀಡಿದ್ದು, ಸದ್ಯದಲ್ಲೇ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.