ಕಾರವಾರ: ಲಾಕ್ ಡೌನ್ ಘೋಷಣೆ ಹಿನ್ನೆಲೆ ಗುಂಪು ಸೇರಿದವರಿಗೆ ಪೊಲೀಸರು ಲಾಠಿ ಮೂಲಕ ಬಿಸಿ ಮುಟ್ಟಿಸಿದ ಘಟನೆ ನಗರದಲ್ಲಿ ನಡೆಯಿತು.
ನಗರಸಭೆ ಆವರಣದಲ್ಲಿ ವ್ಯಾಪಾರಸ್ಥರಿಗೆ ವಿತರಿಸುತ್ತಿದ್ದ ಪಾಸ್ ಪಡೆಯುವುದಕ್ಕೆ ನೂಕುನುಗ್ಗಲು ಏರ್ಪಟ್ಟಿತ್ತು. ಮನೆ ಮನೆಗೆ ತರಕಾರಿಗಳನ್ನು ವಿತರಿಸುವ ಸಂಬಂಧ ನೀಡಲಾಗುತ್ತಿದ್ದ ಪಾಸ್ ಇದಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಲಾಠಿ ಬೀಸಿದರು. ಅಂತರ ಕಾಯ್ದುಕೊಂಡು ಪಾಸ್ ಪಡೆಯುವಂತೆ ಸೂಚಿಸಿದರು.