ETV Bharat / state

ಧಾರವಾಡ: ಕರ್ನಾಟಕ ವಿವಿ ಲೆಕ್ಕಪತ್ರ ವಿಭಾಗದ ಸೂಪರಿಂಟೆಂಡೆಂಟ್ ಆತ್ಮಹತ್ಯೆ - ಯುವತಿ ಆತ್ಮಹತ್ಯೆ

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

ಕವಿವಿ ನೌಕರ ಆತ್ಮಹತ್ಯೆ
ಕವಿವಿ ನೌಕರ ಆತ್ಮಹತ್ಯೆ
author img

By ETV Bharat Karnataka Team

Published : Dec 27, 2023, 3:47 PM IST

Updated : Dec 27, 2023, 10:10 PM IST

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಲೆಕ್ಕಪತ್ರ ವಿಭಾಗದ ಸೂಪರಿಂಟೆಂಡೆಂಟ್ ಚಂದ್ರಕಾಂತ ಸಾವಳಗಿ (55) ಎಂಬವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಯಾರೂ ‌ಇಲ್ಲದ ಕಾರಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಶನಿವಾರ ಕವಿವಿ ನೌಕರರ ಸಹಕಾರಿ ಪತ್ತಿನ ಸಂಘದ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸಾವಳಗಿ ಸೋಲು ಅನುಭವಿಸಿದ್ದರು.

ಇತ್ತೀಚಿನ ಪ್ರಕರಣಗಳು- ಸಿಟಿ ಬಸ್​ ಚಾಲಕ ಆತ್ಮಹತ್ಯೆ: ಸಿಟಿ ಬಸ್​ ಚಾಲಕರೊಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿತ್ತು. ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಸಾವಿಗೀಡಾದವರು. ಸ್ಟೇಟ್ ಬ್ಯಾಂಕ್ ಮತ್ತು ಕಿನ್ಯಾ ನಡುವೆ ಚಲಿಸುವ ಖಾಸಗಿ ಸಿಟಿ ಬಸ್‌ನಲ್ಲಿ ಚಾಲಕರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು. ಡಿ. 19ರ ಮುಂಜಾನೆ ಸೋಮೇಶ್ವರದ ರುದ್ರಪಾದೆಯಿಂದ ಇವರು ಹಾರಿದ್ದರು.

ಜಿಮ್​ ಟ್ರೈನರ್​ ಆತ್ಮಹತ್ಯೆ: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಜಿಮ್ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ವಾರ ನಗರದ ಸಿದ್ದೇಗೌಡ ಲೇಔಟ್​ನಲ್ಲಿ ನಡೆದಿತ್ತು. ಶಬರೀಶ್ (35) ಮೃತರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆಗೆ ಡಿಮ್ಯಾಂಡ್, ಯುವತಿ ಆತ್ಮಹತ್ಯೆ: ಮದುವೆಗೂ ಮುನ್ನ ವರದಕ್ಷಿಣೆಗೆ ಒತ್ತಾಯಿಸಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ಕಳೆದ ವಾರ ನಡೆದಿತ್ತು. ವಿ.ಕವೀಶ (21) ಸಾವಿಗೆ ಶರಣಾದ ಯುವತಿ.

ಯುವ ವಿಜ್ಞಾನಿ ಆತ್ಮಹತ್ಯೆ: ಯುವ ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಇತ್ತೀಚೆಗೆ ನಡೆದಿತ್ತು. ಭರತ್ ಕಲ್ಲರ್ಪೆ (24) ಆತ್ಮಹತ್ಯೆಗೆ ಶರಣಾದವರು. ಭರತ್ ಹೈದರಾಬಾದ್​ನ ಖಾಸಗಿ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೂ ಮುಂಚೆ ಊರಿಗೆ ಆಗಮಿಸಿದ್ದು, ತಾವು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಗೆ ರಾಜೀನಾಮೆ ಪತ್ರ ರವಾನಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸೇತುವೆ ಕುಸಿದು ಕಂದಕದಲ್ಲಿ‌ ಸಿಲುಕಿದ ಟ್ರ್ಯಾಕ್ಟರ್: ತಪ್ಪಿದ ಭಾರಿ ಅನಾಹುತ.. Video

Last Updated : Dec 27, 2023, 10:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.