ಹುಬ್ಬಳ್ಳಿ: ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಹೆಚ್ಚಿಸಿದ್ದರಿಂದ ಸಾರ್ವಜನಿಕರ ಜೊತೆಗೆ ಕೈಗಾರಿಕೋದ್ಯಮಗಳಿಗೂ ಹೊರೆಯಾಗಿದೆ. ಆದ್ದರಿಂದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಇನ್ನಿತರ ಕೈಗಾರಿಕ ಸಂಘ ಸಂಸ್ಥೆಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿವೆ. ಏಳು ದಿನದಲ್ಲಿ ವಿದ್ಯುತ್ ದರ ಕಡಿಮೆ ಮಾಡಲು ಸಂಸ್ಥೆ ಗಡುವು ನೀಡಿದೆ.
ನಗರದಲ್ಲಿ ಇಂದು (ಶುಕ್ರವಾರ) ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಮಾತನಾಡಿದರು. ''ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೋದ್ಯಮಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಈ ಬಾರಿ ಶೇ.75 ರಷ್ಟು ವಿದ್ಯುತ್ ದರ ತುಂಬಬೇಕಾಗಿದೆ. ಇದನ್ನು ಗಂಭೀರವಾಗಿ ವಿರೋಧ ಮಾಡುತ್ತೇವೆ'' ಎಂದರು.
ಇದನ್ನೂ ಓದಿ: ಚಿರತೆಯೊಂದಿಗೆ ಹೋರಾಡಿ ಮಾಲೀಕನ ಪ್ರಾಣ ಉಳಿಸಿದ 'ಪುಣ್ಯಕೋಟಿ'; ಚಿರತೆ ಹಿಮ್ಮೆಟ್ಟಿಸಲು ಹಸುವಿಗೆ ಸಾಥ್ ಕೊಟ್ಟ ಶ್ವಾನ!
''ಕೈಗಾರಿಕೆ ನಡೆಸಲಾಗದೆ ತೊಂದರೆ ಇರುವುದರಿಂದ ವಿರೋಧವಿದೆ. ಏಳು ದಿನ ಸಮಯ ನೀಡಲಾಗುತ್ತಿದೆ. ತಾವು ಕಳುಹಿಸಿದ ಶೇ 75ರಷ್ಟು ಬಿಲ್ ತುಂಬಲಾಗುವುದು. ಮುಂದೆ ಏಳು ದಿನದ ನಂತರ ಸೇರಿಕೊಂಡು ಉತ್ತರ ಕರ್ನಾಟಕದ ಗದಗ ಸೇರಿದಂತೆ ಏಳು ಅಸೋಸಿಯೇಷನ್ ಪಧಾಧಿಕಾರಿಗಳು ಇದ್ದಾರೆ. ಎಲ್ಲರ ಕರೆಸಿಕೊಂಡು ಮುಂದಿನ ಹೋರಾಟ ಮಾಡಲಾಗುವುದು'' ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸದಾನಂದ ಗೌಡರ ಮಾತಿಗೆ ನನ್ನ ಸಹಮತವಿದೆ, ಯಾರನ್ನೂ ಅವಹೇಳನ ಮಾಡಬಾರದು: ಆರ್. ಅಶೋಕ್
ಜನಸಾಮಾನ್ಯರಿಗೆ, ಕೈಗಾರಿಕೋದ್ಯಮಿಗಳಿಗೆ ಹೊರೆ: ಪ್ರತಿವರ್ಷ ಹೆಸ್ಕಾಂ ದರ ಏರಿಕೆ ಮಾಡಲು ಆಯೋಗಕ್ಕೆ ಕೇಳುತ್ತದೆ. ಹೆಸ್ಕಾಂನವರು 25 ರೂ. ಹೆಚ್ಚಳವನ್ನು ಕೇಳಿದರೆ, ಕೆಆರ್‌ಸಿಯವರು ಸಾಮಾನ್ಯವಾಗಿ 10 ರೂ.ಗಳನ್ನು ಅನುಮೋದಿಸುತ್ತಾರೆ. ಹೆಸ್ಕಾಂ ಪ್ರತಿ ಯೂನಿಟ್‌ಗೆ ಶುಲ್ಕದಲ್ಲಿ 50% ಹೆಚ್ಚಳವನ್ನು ಕೇಳಿದರೆ, ಕೆಆರ್‌ಸಿ ಸಾಮಾನ್ಯವಾಗಿ 20 ಅಥವಾ 30 ಪೈಸೆ ವರೆಗೆ ಅನುಮೋದಿಸುತ್ತದೆ. ಈ ಬಾರಿ KERC ಇತಿಹಾಸದಲ್ಲಿಯೇ ಹೆಸ್ಕಾಂದವರು ಅರ್ಜಿಯಲ್ಲಿ ಕೇಳಿದ್ದಕ್ಕಿಂತ ಹೆಚ್ಚು ಸುಂಕವನ್ನು ಅನುಮೋದಿಸಿದೆ. ಇದರಿಂದ ಜನಸಾಮಾನ್ಯರು ಹಾಗೂ ಕೈಗಾರಿಕೋದ್ಯಮಿಗಳು ಸಾಕಷ್ಟು ನಷ್ಟ ಅನುಭವಿಸುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ: ತುಮಕೂರು ಬಿಜೆಪಿ ಟಿಕೆಟ್ಗೆ ವಿ.ಸೋಮಣ್ಣ, ಮುದ್ದಹನುಮೇಗೌಡ ನಡುವೆ ಪೈಪೋಟಿ
ನೆರೆಯ ರಾಜ್ಯಗಳೊಂದಿಗೆ ಸ್ಪರ್ಧೆ ಸಾಧ್ಯವಿಲ್ಲ: ನಮ್ಮ ಉತ್ಪಾದನಾ ವೆಚ್ಚವು ತೀವ್ರವಾಗಿ ಹೆಚ್ಚಾಗುವುದರಿಂದ ನಾವು ನೆರೆಯ ರಾಜ್ಯಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಸಣ್ಣ ಪ್ರಮಾಣದ ಉದ್ಯಮಗಳು ಮುಚ್ಚುವ ಸ್ಥಿತಿ ಎದುರಾಗಿದೆ. ಒಂದು ವಾರದಲ್ಲಿ ಸರ್ಕಾರ ಮಧ್ಯೆಪ್ರವೇಶ ಮಾಡಿ ಶುಲ್ಕ ಕಡಿತ ಮಾಡಬೇಕು. ಇಲ್ಲವಾದ್ರೆ ಮುಂದಿನ ಹೋರಾಟದ ರೂಷರೇಷ ಸಿದ್ಧಪಡಿಸಲು ವಾಣಿಜೋದ್ಯಮ ಸಂಸ್ಥೆ ನಿರ್ಧರಿಸಿದೆ ಎಂದು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ: ಹೊಗೆನಕಲ್ನಲ್ಲಿ ರೋಮಾಂಚಕ ತೆಪ್ಪಗಳ ರೇಸ್; ಗೆದ್ದವರಿಗೆ 4 ಗ್ರಾಂ ಚಿನ್ನ ಬಹುಮಾನ
ಇದನ್ನೂ ಓದಿ: ಮಕ್ಕಳ ಜೀವದ ಜೊತೆ ಚೆಲ್ಲಾಟ: ಆಟೋ ಚಾಲಕರ ವಿರುದ್ಧ ಖಡಕ್ ಕ್ರಮಕ್ಕೆ ಮುಂದಾದ ಹು-ಧಾ ಪೊಲೀಸರು