ಹುಬ್ಬಳ್ಳಿ: ಕೊರೊನಾ ಕಠಿಣ ನಿಯಮ ಜಾರಿ ಹಿನ್ನೆಲೆ ನಿರ್ಗತಿಕರು ತುತ್ತು ಅನ್ನಕ್ಕಾಗಿ ಇನ್ನಿಲ್ಲದೆ ಪರಪಡುತ್ತಿದ್ದಾರೆ. ನಿರ್ಗತಿಕರ, ಭಿಕ್ಷುಕರ ಒಪ್ಪತ್ತಿನ ಹೊಟ್ಟೆ ತುಂಬಿಸುವ ಕಾರ್ಯವನ್ನ ಲಕ್ಷ್ಮೇಶ್ವರದ ಶ್ರೀ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸಂಘದಿಂದ ಕರಿಯಪ್ಪ ಶಿರಹಟ್ಟಿಯವರು ಮಾಡುತ್ತಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಭಿಕ್ಷುಕರಿಗೆ ನಿರ್ಗತಿಕರಿಗೆ ಬಿಸ್ಕತ್ತು, ನೀರು ನೀಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಸಿದವರಿಗೆ ಅನ್ನ ನೀಡುವ ಮೂಲಕ ಅನೇಕ ಜನ ಮೆಚ್ಚುಗೆ ಕೆಲಸ ಮಾಡುತ್ತಾ ಬಂದಿರುವ ಕರಿಯಪ್ಪ ಅವರು, ಭಿಕ್ಷುಕರು, ನಿರ್ಗತಿಕರು ಇರುವ ಸ್ಥಳಗಳಿಗೆ ತಾವೇ ತೆರಳಿ ಅವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.