ಕಲಘಟಗಿ: ಸ್ಥಳೀಯ ತಾಲೂಕು ಪಂಚಾಯಿತಿಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ (ಸಾಮಾನ್ಯ ) ಸಭೆಯಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಕಾರ್ಯ ಮಾಡಲು ಸಿಬ್ಬಂದಿ ಇಲ್ಲದೇ ಇರುವ ಕುರಿತು ಹಾಗೂ ಆರೋಗ್ಯ ರಕ್ಷಾ ಸಮಿತಿ ರಚನೆಯ ಬಗ್ಗೆ ನಡೆದ ಚರ್ಚೆಯಲ್ಲಿ ಗೊಂದಲ ಸೃಷ್ಟಿಯಾಯಿತು.
ಸಭೆಯಲ್ಲಿ ಸದಸ್ಯರಿಗೆ ಚರ್ಚೆ ಮಾಡಲು ಅವಕಾಶ ನೀಡದೇ ಇರುವ ಕುರಿತು ತಾಪಂನ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿ, ಸಭೆಯಲ್ಲಿ ಏನು ನಡೆಯುತ್ತಿದೆ ಎಂಬ ಅನುಮಾನ ಬರುವಂತಾಗಿತ್ತು.
ಅಧ್ಯಕ್ಷೆ ಸುನೀತಾ ಮ್ಯಾಗಿನಮನಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ ಸಿದ್ದಾಪೂರಮಠ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ ಮಧ್ಯಪ್ರವೇಶಿಸಿ ಸಭೆಯ ಗೊಂದಲ ತಿಳಿಗೊಳಿಸಿ ಪ್ರಗತಿ ಪರಿಶೀಲನೆ ಮುಂದುವರೆಸಿದರು.