ಹುಬ್ಬಳ್ಳಿ: ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಜಂಟಿಯಾಗಿ ಹುಬ್ಬಳ್ಳಿ ನಗರ ಪ್ರದಕ್ಷಿಣೆ ಮಾಡಿದರು. ಲಾಕ್ಡೌನ್ ಹಾಗೂ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿ ಬಗ್ಗೆ ಪರಿಶೀಲನೆ ನಡೆಸಿದರು.
ನವನಗರ, ವಿದ್ಯಾನಗರ, ಹೊಸೂರು ವೃತ್ತ, ಚೆನ್ನಮ್ಮ ಸರ್ಕಲ್, ಕೆಸಿಸರ್ಕಲ್, ಕೇಶ್ವಾಪುರ, ಶಬರಿ ನಗರ, ಕುಸುಗಲ್ ರಸ್ತೆ, ರಮೇಶ್ ಭವನ ಸರ್ಕಲ್, ಸ್ಟೇಷನ್ ರೋಡ್, ದುರ್ಗದ ಬೈಲ್, ಡಾಕಪ್ಪನ ಸರ್ಕಲ್, ಹಳೇಹುಬ್ಬಳ್ಳಿ, ಇಂಡಿ ಪಂಪ್, ಗೋಕಲ ರಸ್ತೆಯಲ್ಲಿ ಸಂಚರಿಸಿ ರಸ್ತೆಯಲ್ಲಿ ಅನಗತ್ಯ ಸಂಚರಿಸುತ್ತಿದ್ದ ಜನರಿಗೆ ಎಚ್ಚರಿಕೆ ನೀಡಿದರು.
ಪರಿಶೀಲನೆ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಮತ್ತು ಕಾರ್ಗಳನ್ನು ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ವಶಕ್ಕೆ ಪಡೆದು, ಕರ್ಫ್ಯೂ ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸಲಾಯಿತು.