ಧಾರವಾಡ : ಡ್ರಗ್ಸ್ ತನಿಖೆ ದಾರಿ ತಪ್ಪಬಾರದು, ಯಾರು ತಪ್ಪು ಮಾಡಿದ್ದಾರೆ ಎಂಬ ವಿಚಾರದಲ್ಲಿ ಪೊಲೀಸ್ ತನಿಖೆ ಮುಂದುವರಿದಿದೆ. ತನಿಖೆಯಾಗುವವರೆಗೂ ರಾಜಕಾರಣಿಗಳು ಈ ಕುರಿತು ಮಾತನಾಡದಿರುವುದೇ ಒಳ್ಳೆಯದು ಎಂದು ಜೆಡಿಎಸ್ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಕೊಲಂಬೊದಲ್ಲಿ ಪಕ್ಷದ ಸಭೆಗಾಗಿ ಹೋಗಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯನವರು ಸಮರ್ಥನೆ ಮಾಡಿಕೊಂಡ್ರು, ತನಿಖೆ ಮುಗಿಯುವವರೆಗೆ ಯಾವ ರಾಜಕಾರಣಿಗಳು ಮಾತನಾಡದೇ ಇರುವುದು ಒಳ್ಳೆಯದು ಎಂದರು.
ತನಿಖೆ ಮಾಡಲು ಮೊದಲು ಬಿಡೋಣ, ನಂತರ ಒಂದು ತೀರ್ಮಾನಕ್ಕೆ ಬರಬಹುದು. ಕೊಲಂಬೊಗೆ ಹೋದವರೆಲ್ಲ ಕ್ಯಾಸಿನೋಗೇ ಹೋಗ್ತಾರಾ ಎಂದು ಪ್ರಶ್ನಿಸಿದರು. ಬಿಜೆಪಿಯಲ್ಲಿ ಮಂತ್ರಿಯಾಗಬೇಕು ಅನ್ನೋರು ಬಹಳಷ್ಟು ಜನರಿದ್ದಾರೆ. ಯತ್ನಾಳ್ ಹಾಗೂ ಉಮೇಶ್ ಕತ್ತಿ ಅವರ ಮಾತು ಬಂದ್ ಆಗಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನ್ನುವ ನಡಹಳ್ಳಿ ಅವರ ಧ್ವನಿ ಬಂದ್ ಆಗಿದೆ.
ಬಹಳಷ್ಟು ಜನ ತಮ್ಮ ಧ್ವನಿ ಕಳೆದುಕೊಂಡಿದ್ದಾರೆ. ಈಗ ಧ್ವನಿ ಏಳಲಿದೆ. ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಹೆಚ್‌ಡಿಕೆ ಭೇಟಿ ವಿಚಾರದಲ್ಲಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಅದನ್ನು ರಾಜಕೀಯಗೊಳಿಸಲು ಸುದ್ದಿ ಹೊರ ಹಾಕಲಾಗಿದೆ ಎಂದರು.