ಧಾರವಾಡ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ತನ್ನ ಕಾರಿಗೆ ಬೇರೆಯವರ ವಾಹನದ ನಂಬರ್ ಹಾಕಿಕೊಂಡು ಓಡಾಡಿ, ಇದೀಗ ಸಿಕ್ಕಿಬಿದ್ದಿದ್ದಾರೆ.
ವಾರ್ಡ್ ನಂಬರ್ 2 ಜೆಡಿಎಸ್ ಪಕ್ಷದಿಂದ ಕಾರ್ಪೋರೇಟರ್ ಆಗಿದ್ದ ಶ್ರೀಕಾಂತ್ ಜಮನಾಳ ಎಂಬುವರು ಕಳೆದ ಎರಡು ವರ್ಷದಿಂದ ಬೇರೆ ನಂಬರ್ ಒಳಗೊಂಡ ಟಾಟಾ ಸಫಾರಿ ಕಾರಿನಲ್ಲಿ ಓಡಾಡುತ್ತಿದ್ದರು.
ಇವರು ಬಳಸುತ್ತಿದ್ದ ಕಾರಿನ ನಂಬರ್ ಹುಂಡೈ ವೆರ್ನಾ ಕಾರಿನ ನಂಬರ್ ಆಗಿದ್ದು, ಇನ್ನು ಈ ಟಾಟಾ ಸಫಾರಿ ಕಾರಿನ ಹಿಂಭಾಗ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭಾವಚಿತ್ರದ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುತ್ತಿದ್ದರು. ಇದೆಲ್ಲವನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಇಂದು ವಾಹನವನ್ನು ಧಾರವಾಡ ಸಂಚಾರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.