ಧಾರವಾಡ: ಕಾಂಗ್ರೆಸ್ನವರಿಗೆ ಬೇರೆ ವಿಷಯಗಳಿಲ್ಲ. ಹೀಗಾಗಿ ಎಲ್ಲದರಲ್ಲೂ ಅವರು ರಾಜಕೀಯ ಮಾಡುತ್ತಾರೆ. ಸಿಬಿಐ, ಇಡಿ ದಾಳಿಯಾದರೆ ರಾಜಕೀಯ ಮಾಡುತ್ತಾರೆ ಎಂದು ಧಾರವಾಡದಲ್ಲಿ ಸಚಿವ ಜಗದೀಶ ಶೆಟ್ಟರ್ ಹರಿಹಾಯ್ದಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಬೇರೆ ವಿಷಯಗಳಿಲ್ಲ, ಅವರು ಸಿಎಂ ಆಗಿದ್ದವರು. ಜವಾಬ್ದಾರಿ ಸ್ಥಾನದಲ್ಲಿದ್ದವರು ಯೋಚನೆ ಮಾಡಿ ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.
ಉಪಚುನಾವಣೆಯಲ್ಲಿ ಅವರಿಗೆ ಹಿನ್ನೆಡೆಯಾಗಲಿದೆ. ಎಕ್ಸಿಟ್ ಪೋಲ್ಗಳಲ್ಲಿ ತಿಳಿದುಬಂದಿದೆ. ಎಕ್ಸಿಟ್ ಪೋಲ್ ಪ್ರಕಾರ ಹಿನ್ನೆಡೆ ಆರಂಭವಾಗಿದೆ. ಕಾಂಗ್ರೆಸ್ನ ಅಧೋಗತಿ ಆರಂಭವಾಗಿದೆ. ಹೀಗಾಗಿ ಬಂಧನ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅನ್ಯಾಯವಾಗಿದ್ದರೆ ಕೋರ್ಟ್ಗೆ ಹೋಗಲಿ ಸಿಬಿಐ, ಇಡಿ ಇಲಾಖೆ ಸರ್ಕಾರದ ಅಡಿಯಲ್ಲಿಯೇ ಕೆಲಸ ಮಾಡಬೇಕಲ್ಲವೇ? ಯುಪಿಎ ಸರ್ಕಾರದ ವೇಳೆಯಲ್ಲಿ ಜನಾರ್ದನರೆಡ್ಡಿ ಬಂಧನವಾಗಲಿಲ್ಲವೇ? ಅವರನ್ನು ಜೈಲಿನಲ್ಲಿ ಇಡಲಿಲ್ಲವೇ? ಆಗ ಯುಪಿಎ ಸರ್ಕಾರ ಇತ್ತಲ್ಲವೇ? ಕಾಂಗ್ರೆಸ್ನವರು ಇಷ್ಟು ವರ್ಷ ದೇಶವನ್ನು ಆಳಿದ್ದಾರೆ. ಅವರು ಎಲ್ಲವೂ ನಡೆಯುತ್ತೆ ಅಂದುಕೊಂಡಿದ್ದರು. ಆದರೆ ಇವತ್ತು ತನಿಖೆ ನಡೆಯುತ್ತಿದೆ. ಹೀಗಾಗಿ ಏನು ಮಾಡಬೇಕೆನ್ನೋದು ಗೊತ್ತಾಗುತ್ತಿಲ್ಲ ತಪ್ಪು ಮಾಡದಿದ್ದರೆ ಹೆದರೋ ಅವಶ್ಯಕತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿನಯ್‌ಗೆ ಸ್ವಾಮಿಗಳ ಬೆಂಬಲ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಇಂಥ ಪ್ರಕರಣಗಳನ್ನು ಧರ್ಮಕ್ಕೆ, ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಹಾಗೆ ಮಾಡೋದು ತಪ್ಪು. ಸಿಬಿಐ ತಪ್ಪು ಮಾಡಿದರೆ ಕೋರ್ಟ್ಗೆ ಹೋಗಲಿ ಎಂದರು.