ETV Bharat / state

ಇಸ್ಕಾನ್​​ನಿಂದ ಹುಬ್ಬಳ್ಳಿಯಲ್ಲಿ  ಮಕ್ಕಳಿಗಾಗಿ ಅತಿದೊಡ್ಡ 'ಸಾಂಸ್ಕೃತಿಕ ಹಬ್ಬ'

ಭಾರತೀಯ ಸಂಸ್ಕೃತಿ ಕುರಿತು ಇಂದಿನ ಮಕ್ಕಳಲ್ಲಿ ಅರಿವು ಮೂಡಿಸಲು ಹುಬ್ಬಳ್ಳಿ ಇಸ್ಕಾನ್ ನಿಂದ ’ಸಾಂಸ್ಕೃತಿಕ ಹಬ್ಬ’ವನ್ನು ಹಮ್ಮಿಕೊಳ್ಳಲಾಗಿದೆ.  ಜುಲೈ 3 ರಿಂದ 8ರವರೆಗೆ ಒಂದು ವಾರ ರಾಯಾಪುರದಲ್ಲಿರುವ ಇಸ್ಕಾನ್ ಮಂದಿರದಲ್ಲಿ ಈ ಉತ್ಸವ ಆಯೋಜನೆ ಮಾಡಲಾಗಿದೆ.

author img

By

Published : Jun 28, 2019, 1:54 PM IST

ಸಾಂಸ್ಕೃತಿಕ ಹಬ್ಬ

ಹುಬ್ಬಳ್ಳಿ: ನಮ್ಮ ದೇಶದ ಭವ್ಯ ಸಂಸ್ಕೃತಿ ಕುರಿತು ಇಂದಿನ ಮಕ್ಕಳಲ್ಲಿ ಅರಿವು ಮೂಡಿಸಲು ಹುಬ್ಬಳ್ಳಿ ಇಸ್ಕಾನ್​​ನಿಂದ ’ಸಾಂಸ್ಕೃತಿಕ ಹಬ್ಬ’ವನ್ನು ಹಮ್ಮಿಕೊಳ್ಳಲಾಗಿದೆ. ಜುಲೈ 3 ರಿಂದ 8ರವರೆಗೆ ಒಂದು ವಾರ ರಾಯಾಪುರದಲ್ಲಿರುವ ಇಸ್ಕಾನ್ ಮಂದಿರದಲ್ಲಿ ಈ ಉತ್ಸವನನ್ನು ಆಯೋಜನೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ ಅವರು, ಜುಲೈ 4 ರಂದು ಬುಧವಾರ ಬೆಳಗ್ಗೆ 10.30ಕ್ಕೆ ಇಸ್ಕಾನ್ ಮಂದಿರದಲ್ಲಿ ’ಸಾಂಸ್ಕೃತಿಕ ಹಬ್ಬ’ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಮಕ್ಕಳಿಗಾಗಿ ಆಯೋಜಿಸಲಾದ ಅತಿದೊಡ್ಡ ಸಾಂಸ್ಕೃತಿಕ ಹಬ್ಬ ಇದಾಗಿದ್ದು, ನಾಟಕ, ನೃತ್ಯ, ರಂಗೋಲಿ ಸೇರಿದಂತೆ ಸುಮಾರು 30 ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ಹಬ್ಬ

ಉತ್ಸವದಲ್ಲಿ ಪಾಲ್ಗೊಳ್ಳಲು 12 ಸಾವಿರಕ್ಕೂ ಅಧಿಕ ಮಕ್ಕಳು ನೋಂದಾಯಿತರಾಗಿದ್ದಾರೆ. ಈ ಸಾಂಸ್ಕೃತಿಕ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗಿನ ಮಕ್ಕಳು ಮುಕ್ತವಾಗಿ ಭಾಗವಹಿಸಲು ಅಪೂರ್ವ ಅವಕಾಶ ಒದಗಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ವಿಶೇಷ ಬಹುಮಾನ ಹಾಗೂ ಅತಿ ಹೆಚ್ಚು ಅಂಕಗಳಿಸಿ ಅಗ್ರಸ್ಥಾನ ಪಡೆದ ಶಾಲೆಗೆ ಸಾಂಸ್ಕೃತಿಕ ಉತ್ಸವದ ಟ್ರೋಫಿಯನ್ನು ಸಮಾರೋಪ ಸಮಾರಂಭದಂದು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು, ಇಂದು ನಡೆದ ವಿಶೇಷ ಸುದ್ದಿಗೋಷ್ಠಿಯಲ್ಲಿ ಇಸ್ಕಾನ್ ಉಪಾಧ್ಯಕ್ಷ ರಘೋತ್ತಮ ದಾಸ, ಸ್ವರ್ಣ ಗ್ರೂಪ್ ಆಫ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ.ಚಿ ಗುರುಪಾಟಿ, ವಿ.ಎಸ್.ವಿ ಪ್ರಸಾದ್​, ಯುರೋ ಕಿಡ್ಸ್‌ನ ನರೇಂದ್ರ ಬರವಾಲ, ರಾಮಗೋಪಾಲ್​ ದಾಸ ಮತ್ತಿತರರು ಭಾಗಿಯಾಗಿದ್ದರು.

Intro:ಹುಬ್ಬಳ್ಳಿ-02
ಸಂಸ್ಕೃತಿಯ ಕುರಿತು ಇಂದಿನ ಮಕ್ಕಳಲ್ಲಿ ಅರಿವು ಮೂಡಿಸಿ ಅದರ ಬಗ್ಗೆ ಹೆಮ್ಮೆಪಡುವಂತೆ ಪ್ರೇರೆಪಿಸಲು ಇಸ್ಕಾನ್ ವತಿಯಿಂದ ಜುಲೈ 3ರಿಂದ 8ರವರೆಗೆ ಒಂದು ವಾರ ರಾಯಾಪುರದಲ್ಲಿರುವ ಇಸ್ಕಾನ್ ಮಂದಿರದಲ್ಲಿ ’ಸಾಂಸ್ಕೃತಿಕ ಹಬ್ಬ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಜು4 ರಂದು ಬುಧವಾರ ಬೆಳಿಗ್ಗೆ 10.30ಕ್ಕೆ ಇಸ್ಕಾನ್ ಮಂದಿರದಲ್ಲಿ ಆರಂಭಗೊಳ್ಳಲಿದ್ದು,
ಮಕ್ಕಳಿಗಾಗಿ ಆಯೋಜಿಸಲಾದ ಅತಿದೊಡ್ಡ ಸಾಂಸ್ಕೃತಿಕ ಹಬ್ಬ ಇದಾಗಿದೆ. ನಾಟಕ, ನೃತ್ಯ, ರಂಗೋಲಿ ಸಹಿತ ಸುಮಾರು 30ಸ್ಫರ್ಧೆಗಳನ್ನು ಆಯೋಜಿಸಲಾಗಿದೆ ಎಂದರು. 12 ಸಾವಿರಕ್ಕೂ ಅಧಿಕ ಮಕ್ಕಳು ಉತ್ಸವಕ್ಕೆ ನೋಂದಾಯಿತರಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ಎಲ್‌ಕೆಜಿಯಿಂದ 19ನೇ ತರಗತಿ ವರೆಗಿನ ಮಕ್ಕಳಿಗೆ ಈ ಉತ್ಸವವು ಅಪೂರ್ವ ಅವಕಾಶವನ್ನು ಒದಗಿಸುತ್ತಿದ್ದು, ಈ ಸಾಂಸ್ಕೃತಿಕ ಉತ್ಸವ ಶಾಲಾ ಮಕ್ಕಳಿಗೆ ಮುಕ್ತವಾಗಿದೆ ಎಂದು ಅವರು ತಿಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿಶೇಷ ಬಹುಮಾನ ಹಾಗೂ ಅತಿ ಹೆಚ್ಚು ಅಂಕಗಳಿಸಿ ಅಗ್ರಸ್ಥಾನ ಪಡೆದ ಶಾಲೆಗೆ ಸಾಂಸ್ಕೃತಿಕ ಉತ್ಸವದ ಟ್ರೋಫಿಯನ್ನು ಸಮಾ ರೋಪ ಸಮಾರಂಭದಂದು ನೀಡಲಾಗುವುದು ಎಂದು ಹೇಳಿದರು.
ಇಸ್ಕಾನ್ ಉಪಾಧ್ಯಕ್ಷ ರಘೋತ್ತಮ ದಾಸ, ಸ್ವರ್ಣ ಗ್ರುಪ್ ಆಪ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ.ಚಿಗುರುಪಾಟಿ ವಿ.ಎಸ್.ವಿ.ಪ್ರಸಾದ, ಯುರೋ ಕಿಡ್ಸ್‌ನ ನರೇಂದ್ರ ಬರವಾಲ, ರಾಮಗೋಪಾಲ ದಾಸ ಮತ್ತಿತರರು ಗೋಷ್ಠಿಯಲ್ಲಿದ್ದರು.
ಬೈಟ್-ರಾಜೀವ ಲೋಚನದಾಸ್, ಹು-ಧಾ ಇಸ್ಕಾನ್ ಅಧ್ಯಕ್ಷBody:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.