ಧಾರವಾಡ: ಲಾಕ್ಡೌನ್ ನಿಯಮಗಳಲ್ಲಿ ಕೆಲ ಸಡಿಲಿಕೆ ಮಾಡಿದ ಕಾರಣ ಜಿಪಂ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರೆದಿದೆ.
ಸಿಬಿಐ ಅಧಿಕಾರಿಗಳು ಮೂವರನ್ನು ವಿಚಾರಣೆಗೊಳಪಡಿಸಿದ್ದಾರೆ. ಭೂ ಸ್ವಾಧೀನ ಕಚೇರಿಯ ಓರ್ವ ಸಿಬ್ಬಂದಿ, ಮರಳು ವ್ಯಾಪಾರಿ ಸೇರಿ ಮೂವರ ವಿಚಾರಣೆ ಮಾಡಲಾಯಿತು.
ಕೊಲೆ ಹಿನ್ನೆಲೆ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೂವರ ವಿಚಾರಣೆ ಮಾಡಲಾಗಿದೆ. ಯೋಗೀಶ್ ಗೌಡಗೆ ಸಂಬಂಧಿಸಿದ ಭೂ ಖರೀದಿ ವ್ಯವಹಾರಗಳ ಕುರಿತು ಉಪನಗರ ಠಾಣೆಯಲ್ಲಿ ವಿಚಾರಣೆ ನಡೆದಿದೆ.