ಹುಬ್ಬಳ್ಳಿ: ಇನ್ಫೋಸಿಸ್ ಹುಬ್ಬಳ್ಳಿ ಘಟಕ ಕಾರ್ಯಾರಂಭಗೊಳಿಸಲಾಗಿದ್ದು, ಇದು ಸ್ಟಾರ್ಟ್- ಇನ್ಫೋಸಿಸ್ -ಹುಬ್ಬಳ್ಳಿ ತಂಡ ಧಾರವಾಡ ಜಿಲ್ಲೆಯನ್ನು ಐಟಿ -ಬಿಟಿ ಕೇಂದ್ರ ಮಾಡುವ ದಶಕಗಳ ಕನಸನ್ನು ನನಸು ಮಾಡುವುದಕ್ಕಾಗಿ ಒಂದೂವರೆ ತಿಂಗಳಿನಿಂದ ನಡೆಸಿದ ನಿರಂತರ ಅಭಿಯಾನ ಈಗ ಯಶಸ್ವಿಯಾಗಿದೆ.
ಇನ್ಫೋಸಿಸ್ ಹುಬ್ಬಳ್ಳಿ ಘಟಕದಲ್ಲಿ ಸಹಾಯಕ ಸಿಬ್ಬಂದಿ (ಸಪೋರ್ಟ್ ಸ್ಟಾಫ್)ಗಳ ಸಂದರ್ಶನ ಕೂಡ ನಡೆಯಿತು. ಇನ್ಫೋಸಿಸ್ ಹುಬ್ಬಳ್ಳಿ ಸಂಪೂರ್ಣ ಕಾರ್ಯಾರಂಭ ಮಾಡಿ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದರೆ 5000 ಸಿಬ್ಬಂದಿಗಳಿಗೆ ಕೆಲಸ ನೀಡಬಹುದಾಗಿದೆ.
ಇನ್ನು ಸ್ಟಾರ್ಟ್-ಇನ್ಫೋಸಿಸ್ - ಹುಬ್ಬಳ್ಳಿ ತಂಡ ಇನ್ಫೋಸಿಸ್ ಕಟ್ಟಡ ಚಿತ್ರದ ಕೇಕ್ ಕತ್ತರಿಸುವ ಮೂಲಕ ಸಿಹಿಯನ್ನು ಹಂಚಿ ಸಂಭ್ರಮಿಸಿದರು.
ಇದನ್ನೂ ಓದಿ:ಬೆಲೆ ಏರಿಕೆ ಬಗ್ಗೆ ಸದನದಲ್ಲಿ ವಿತ್ತ ಸಚಿವೆ ಮಾತು; ಕಾಂಗ್ರೆಸ್ ಸಂಸದರಿಂದ ಸಭಾತ್ಯಾಗ