ETV Bharat / state

ಕೈಕೊಟ್ಟ ಮಳೆ.. ಹಣ ಕೊಟ್ಟು ನೀರು ಹಾಯಿಸುವಂತಾಯಿತು ರೈತನ ಬದುಕು - ಮಳೆ

ಮುಂಗಾರು ಮಳೆ ರಾಜ್ಯದಲ್ಲಿ ಸರಿಯಾಗಿ ಬಾರದೇ ಇದ್ದು ರೈತರು ತಮ್ಮ ಜಮೀನಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.

ಹಣ ಕೊಟ್ಟು ನೀರು ಹಾಯಿಸುತ್ತಿರುವ ರೈತರು
ಹಣ ಕೊಟ್ಟು ನೀರು ಹಾಯಿಸುತ್ತಿರುವ ರೈತರು
author img

By

Published : Jul 1, 2023, 2:25 PM IST

Updated : Jul 1, 2023, 6:42 PM IST

ನೀರು ಹಾಯಿಸುತ್ತಿರುವ ರೈತರು

ಹುಬ್ಬಳ್ಳಿ: ಆಕಾಶದಲ್ಲಿ ಮೋಡಗಳು ಆವರಿಸುತ್ತಿವೆ. ಆದರೆ, ಮಳೆ ಹನಿ ಮಾತ್ರ ಕಾಣುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿ ಸಾಲದ ಶೂಲದಲ್ಲಿ ಸಿಲುಕಿರುವ ರೈತರು ಇದೀಗ ಮುಂಗಾರು ಮಳೆಯ ಅವಕೃಪೆಯಿಂದ ಕಂಗೆಟ್ಟಿದ್ದಾರೆ. ಕುಡಿಯುವ ನೀರಿನ ಪರದಾಟದೊಂದಿಗೆ ಈಗ ಹಣವನ್ನು ಖರ್ಚು ಮಾಡಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಕುವ ಸ್ಥಿತಿಗೆ ಬಂದಿದ್ದಾನೆ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡು ಮತ್ತೊಂದು ಹಂಗಾಮಿಗೆ ಸಿದ್ಧತೆಯಾಗಬೇಕಿತ್ತು.

ತುಂತುರು ಮಳೆ ಕೂಡ ಸುರಿಯದ ಪರಿಣಾಮ ಬರದ ಭಯ ಸೃಷ್ಟಿಯಾಗಿದೆ. ಸ್ಥಿತಿ ಹೀಗೆ ಮುಂದುವರಿದರೆ ರೈತನ ಪರಿಸ್ಥಿತಿ ದಯನೀಯವಾಗಲಿದೆ. ಬಾರೋ ಮಳೆರಾಯ ಎಂದು ಒಣ ಬೇಸಾಯ ನಂಬಿಕೊಂಡಿರುವ ಜಿಲ್ಲೆಯ ಧಾರವಾಡ, ಗದಗ ಹಾವೇರಿ ಸೇರಿದಂತೆ ಎಲ್ಲೆಡೆ ಈಗ ಆತಂಕ ಆವರಿಸಿದೆ. ಮಳೆ ಬಂದರೆ ಮಾತ್ರ ಕೃಷಿ ಎನ್ನುವ ಕೃಷಿಕರು ಆಕಾಶದೆಡೆ ಮುಖ ಮಾಡಿದ್ದಾರೆ. ಜೋರಾಗಿ ಮಳೆ ಸುರಿದು ಎಲ್ಲೆಡೆ ಹಸಿರು ಕಾಣುವ ಬದಲು ಬಿಸಿಲು, ಬೀಸುತ್ತಿರುವ ಗಾಳಿ ಮಾತ್ರ ರೈತನ ಎದೆಬಡಿತ ಹೆಚ್ಚಿಸಿದೆ.

ನೀರಿಲ್ಲದೆ ಒಣಗುತ್ತಿರುವ ಬೆಳೆಗಳು: ಇನ್ನೂ ಜೂನ್‌ನಿಂದ ಆರಂಭಗೊಳ್ಳುವ ಮುಂಗಾರು ಮಳೆ ಸೆಪ್ಟೆಂಬರ್‌ವರೆಗೆ ಸುರಿಯುತ್ತದೆ. ಜೂನ್, ಜುಲೈನಲ್ಲಿ ಅಲ್ಪಸ್ವಲ್ಪ ಮಳೆ ಸುರಿದಿದ್ದು ಬಿಟ್ಟರೆ ಮೋಡಗಳ ಚೆಲ್ಲಾಟ ಮಾತ್ರ ಕಣ್ಣಿಗೆ ಕಟ್ಟುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನು ಹದಿನೈದು ದಿನಗಳಲ್ಲಿ ಮಳೆಯಾಗಬೇಕು. ವರುಣ ಕೃಪೆ ತೋರದಿದ್ದರೆ ರೈತರು ಹದಗೊಳಿಸಿದ ಭೂಮಿಯಲ್ಲಿ ಬೆಳೆ ಕಾಣಲು ಸಾಧ್ಯವಿಲ್ಲ. ಬಾಡಿದ ಬೆಳೆ ಜಿಲ್ಲೆಯಲ್ಲಿ ಬಿತ್ತನೆ ಕೈಗೊಂಡಿದ್ದ ಸಜ್ಜೆ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ.

ರೈತರು ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಅಲ್ಪ ಸ್ವಲ್ಪ ಮಳೆಯಾದಾಗ ಬಿತ್ತನೆ ಕೈಗೊಂಡಿದ್ದರು. ಇದೀಗ ಬೆಳೆಯುವ ಹಂತದಲ್ಲಿರುವ ಬೆಳೆ ಒಣಗಿ ಹಾನಿಯಾಗುವ ಸ್ಥಿತಿ ಎದುರಾಗಿದೆ. ನೀರಾವರಿ ಸೌಲಭ್ಯವಿರುವ ರೈತರು ಕೈಗೊಂಡ ಬಿತ್ತನೆಗೆ ಉತ್ತಮ ಫಲಿತಾಂಶ ದೊರೆತಿದೆ. ಒಣ ಬೇಸಾಯದಲ್ಲಿ ಮಾತ್ರ ನಿರೀಕ್ಷಿತ ಪ್ರಗತಿಯಿಲ್ಲ. ಹೀಗಾಗಿ ಹಣ ಕೊಟ್ಟು ನಾರು ಖರೀದಿಸಿ ಜಮೀನಿಗೆ ನೀರುಣಿಸುವ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಬರಿದಾಗುತ್ತಿವೆ ಅಣೆಕಟ್ಟುಗಳು: ಮುಂಗಾರು ಕೊರತೆಯಿಂದ ರಾಜ್ಯದ ಹಲವು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ತೀರ ಕ್ಷೀಣಿಸುತ್ತಿದೆ. ಇತ್ತೀಚೆಗೆ ವಿಜಯಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟಿನಲ್ಲಿನ ನೀರಿನ ಮಟ್ಟವು 507.50 ಮೀಟರ್​ಗೆ ಇಳಿಮುಖವಾಗಿತ್ತು. ಜೊತೆಗೆ ಶಿವಮೊಗ್ಗದ ಲಿಂಗನಮಕ್ಕಿ ಡ್ಯಾಂನಲ್ಲಿಯೂ ನೀರಿನ ಮಟ್ಟ ಕುಸಿದಿದೆ. ಇದರಿಂದ ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಮಡೇನೂರು ಅಣೆಕಟ್ಟೆಯು ಹೊರ ಜಗತ್ತಿಗೆ ಕಾಣ ಸಿಗುತ್ತಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಕೂಡ ನೀರಿಲ್ಲದೆ ಖಾಲಿಯಾಗುತ್ತಿದೆ. ಹೀಗಾಗಿ ಡ್ಯಾಂನ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ವಿಠ್ಠಲ ದೇವಸ್ಥಾನವು ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

ರಾಜ್ಯದಲ್ಲಿ ಮಳೆಯಾಟ: ಹಲವು ಜಿಲ್ಲೆಗಳಲ್ಲಿ ಬಿಟ್ಟೂ ಬಿಟ್ಟು ಮಳೆಯಾಗುತ್ತಿದ್ದರೆ, ಕೆಲವು ಜಿಲ್ಲೆಗೆ ವರುಣನ ದರ್ಶನವೇ ಇನ್ನೂ ಆಗಿಲ್ಲ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ರಾಯಚೂರು ಮತ್ತಿತರೆಡೆ ಮಳೆ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಕನ್ನಡ ಜಿಲ್ಲೆಗಳಲ್ಲಿ ಜುಲೈ 3ರವರೆಗೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ವಿಡಿಯೋ: ಬರಗಾಲದಿಂದ ಅನ್ನದಾತನ ಕಣ್ಣೀರು.. ಬೆಳೆಯ ಮಧ್ಯೆ ಬಿದ್ದು ಗೊಳಾಡಿದ ರೈತ!

Last Updated : Jul 1, 2023, 6:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.