ETV Bharat / state

ಬಿಆರ್​ಟಿಎಸ್​ ಸೇತುವೆ ಬಿರುಕು: ಪ್ರಯಾಣಿಕರಲ್ಲಿ ಆತಂಕ - undefined

ಅವಳಿ ನಗರದಲ್ಲಿ ತ್ವರಿತ ಸಾರಿಗೆ ಸೇವೆ ನೀಡಲು ನಿರ್ಮಿಸಿದ ಬಿಆರ್​ಟಿಎಸ್​ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.

ಬಿಆರ್​ಟಿಎಸ್​ ಕಾಮಗಾರಿಯಲ್ಲಿನ ಲೋಪ ದೋಷಗಳಿಂದ ಸಾರ್ವಜನಿಕರಲ್ಲಿ ಆತಂಕ
author img

By

Published : Jul 14, 2019, 7:07 PM IST

ಧಾರವಾಡ: ಹಲವು ವಿರೋಧಗಳ ನಡುವೆ ಅವಳಿ ನಗರದ ಮಧ್ಯೆ ಬಿಆರ್​ಟಿಎಸ್ ಸೇತುವೆ ನಿರ್ಮಿಸಿ ನಿತ್ಯ ಬಸ್ ಸಂಚಾರ ಪ್ರಾರಂಭವಾಗಿದೆ. ಆದರೆ, ಅಪಘಾತ, ಮುನ್ನೆಚ್ಚರಿಕಾ ಕ್ರಮಗಳ ಲೋಪಗಳ ಜತೆ ಕಾಮಗಾರಿಯಲ್ಲಿನ ಕಳಪೆ ಗುಣಮಟ್ಟ ಜನರನ್ನು ಕೆರಳಿಸಿದೆ.

ಬಿಆರ್​ಟಿಎಸ್​ ಕಾಮಗಾರಿಯಲ್ಲಿನ ಲೋಪ ದೋಷಗಳಿಂದ ಸಾರ್ವಜನಿಕರಲ್ಲಿ ಆತಂಕ

ನವಲೂರ ಬಳಿಯ ಬಿಆರ್​ಟಿಎಸ್​ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಹೆಚ್ಚಿಸಿದೆ. ಅವಳಿ ನಗರದ ತ್ವರಿತ ಸಾರಿಗೆ ಸೇವೆ ಒದಗಿಸುವ ಯೋಜನೆಯ ಕಾಮಗಾರಿಯಲ್ಲಿ ಅಕ್ರಮದ ವಾಸನೆ ಹರಿದಾಡುತ್ತಿದೆ.

ಸುಮಾರು 6 ವರ್ಷಗಳ ಕಾಲ ಸಮಯಾವಕಾಶ ತೆಗೆದುಕೊಂಡು, ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳಲಾಗಿದೆ. 20 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ಪ್ರಯಾಣಿಕರು, ಸಾರ್ವಜನಿಕರ ಆರೋಪ.

Intro:ಧಾರವಾಡ: ಹಲವು ವಿರೋಧಗಳ ನಡುವೆ ಅವಳಿ ನಗರದ ನಡುವೆ ಬಿಆರ್ಟಿಎಸ್ ಯೋಜನೆ ಜಾರಿಗೊಂಡಿದೆ. ಈಗಾಗಲೇ ಹುಬ್ಬಳ್ಳಿ-ಧಾರವಾಡದೆಲ್ಲೆಡೆ ಚಿಗರಿ ಬಸ್ ಸಂಚಾರ ಆರಂಭಗೊಂಡರು ಯೋಜನೆಯ ಮೇಲಿನ ಆರೋಪ ಹಾಗೂ ವಿವಾದಗಳಿಂದ ಮುಕ್ತಿಯಾದಂತೆ ಕಂಡುಬರುತ್ತಿಲ್ಲ. ಇದಕ್ಕೆ ಪೂರಕ ಎಂಬಂತೆ ಬಿಆರ್ಟಿಎಸ್ ರಸ್ತೆ ಹಾಗೂ ನವಲೂರ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಬಿಆರ್ಟಿಎಸ್ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ತ್ವರಿತ ಸಾರಿಗೆ ಸೇವೆ ಒದಗಿಸುವ ಯೋಜನೆ. ಈ ಯೋಜನೆ ನಿರ್ಮಾಣದಲ್ಲಿನ ವಿಳಂಬ ನೀತಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಸುಮಾರು ಆರು ವರ್ಷಗಳ ಕಾಲ ಸಮಯಾವಕಾಶ ತೆಗೆದುಕೊಂಡು ಅವೈಜ್ಞಾನಿಕ ಕಾಮಗಾರಿ ಜಾರಿಗೆ ತಂದಿರುವುದಕ್ಕೆ ಇವತ್ತಿಗೂ ಜನರು ವಿರೋಧ‌ ವ್ಯಕ್ತಪಡಿಸುತ್ತಾ ಬಂದಿದ್ದಾರೆ. 20 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಕಳಪೆ ಆಗಿದೆ ಎಂಬ ಕೂಗು ಕೇಳಿ ಬರುತ್ತಿದೆ.

ನವಲೂರ ಬಳಿಯ ಬಿಆರ್ಟಿಎಸ್ ಸೇತುವೆಯ ಸಿಮೆಂಟ್ ರಸ್ತೆಯಲ್ಲಿ ಬಿರುಕು ಬಿಟ್ಟಿರುವುದಲ್ಲದೇ, ಚಿಕ್ಕ ಚಿಕ್ಕ ಗುಂಡಿಗಳು ಕಾಣಿಸಿಕೊಂಡಿವೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ನಡುವೆ ನಿರ್ಮಾಣಗೊಂಡಿರುವ ನವಲೂರು ಸೇತುವೆ ಮೂರು ಇಂಚಿನಷ್ಟು ಬಿರುಕುಗೊಂಡಿದೆ.

ಬಿರುಕುಗೊಂಡಿರುವ ರಸ್ತೆಯ ಮೇಲೆಯೇ ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿದ್ದು, ಪ್ರಯಾಣಿಕರ ಜೀವದ ಜೊತೆ ಬಿಆರ್ಟಿಎಸ್ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ.

ಸೇತುವೆಯಲ್ಲಿ ಬಿರುಕು ಬಿಟ್ಟಿರುವುದರಿಂದ ಕೆಳಗಿನ ರಸ್ತೆ ಕೂಡಾ ಕಾಣುವಷ್ಟರ ಮಟ್ಟಿಗೆ ಬಿರುಕು ಕಾಣಿಸಿಕೊಂಡಿದ್ದು, ಸೇತುವೆ ಮೇಲೆ ಸುತ್ತಾಡುವ ವಾಹನ‌ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೇಪೆ ಹಚ್ಚಲಾದ ಕೆಲಸ ಮಳೆಯ ನೀರಿಗೆ ‌ಕೊಚ್ಚಿ‌ ಹೋಗಿದೆ. ಸೇತುವೆಯಲ್ಲಿ ಕಾಂಕ್ರೀಟ್ ಬಿರುಕು ಬಿಟ್ಟ ಸ್ಥಳಕ್ಕೆ ಡಾಂಬರ್ ಸುರಿಯಲಾಗಿದೆ. ಇನ್ನು ಸೇತುವೆ ನಿರ್ಮಾಣದ ವೇಳೆ ಸೇತುವೆಯಲ್ಲಿ ಕಾಂಕ್ರೀಟ್ ಹಾಕುವಾಗ ಬಳಸಿದ್ದ ಸ್ಟೀಲ್ ಗಳು ಸಹ ಮೇಲಿಂದ ಕಾಣಿಸಿಕೊಳ್ಳುತ್ತಿರುವುದು ಕಾಮಗಾರಿ ಕಳಪೆಯಾಗಿರುವುದನ್ನು ಸಾರಿ ಹೇಳುತ್ತಿದೆ.Body:ಕಾಂಕ್ರೀಟ್​ಗೆ ಉತ್ತಮ ಗುಣಮಟ್ಟದ ಸಿಮೆಂಟ್, ಮರಳು, ಸ್ಟೀಲ್ ಬಳಸಿ ಸರಿಯಾಗಿ ಕ್ಯೂರಿಂಗ್ ಮಾಡಿದರೆ ಬಿರುಕು ಬಿಡುವ, ಸರಳು ಮೇಲೆದ್ದು ಬರುವ ಪ್ರಶ್ನೆಯೇ ಇಲ್ಲ. ಆದಾಗ್ಯೂ ಇತ್ತೀಚೆಗಷ್ಟೇ ಬಳಕೆಗೆ ಮುಕ್ತವಾಗಿರುವ ಸೇತುವೆಯಲ್ಲಿ ಸರಳು ಮೇಲೆದ್ದು ಬಂದಿರುವುದು ಇಡೀ ನಿರ್ಮಾಣ ಕಾಮಗಾರಿಯ ಗುಣಮಟ್ಟದ ಬಗ್ಗೆ ಭಾರಿ ಸಂಶಯ ಮೂಡಿಸಿದೆ. ದಿನನಿತ್ಯ ಸಾವಿರಾರು ಪ್ರಯಾಣಿಕರು ಸೇತುವೆಯ ಮೇಲೆ ಪ್ರಯಾಣ ಬೆಳೆಸುವ ಕೆಲಸದಲ್ಲಿ ಬಿಆರ್ಟಿಎಸ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಆಗಬಹುದಾದ ಅನಾಹುತವನ್ನು‌ ತಡೆಗಟ್ಟಲು ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಬೈಟ್: ಮೋಹನ್ ರಾಮದುರ್ಗ, ಸ್ಥಳೀಯರುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.