ETV Bharat / state

ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ.. ಬಿಲ್ ಪಾವತಿಗೆ ತಾಪಂ ಇಒ ವಿಳಂಬ: ಗುತ್ತಿಗೆದಾರ ಆರೋಪ - ಕೋವಿಡ್ ಪರಿಕರ

ಬಿಲ್ ಪಾವತಿ ಮಾಡದೇ ಸತಾಯಿಸುವವರ ವಿರುದ್ದ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿರುವೆ. ರಾಷ್ಟ್ರಪತಿ ಭವನದಿಂದ ಬಿಲ್ ಪಾವತಿಗೆ ಆದೇಶ ಬಂದರೂ ಅಧಿಕಾರಿಗಳು ಹಣ ಪಾವತಿಸಿಲ್ಲ ಎಂದು ಗುತ್ತಿಗೆದಾರ ಬಸವರಾಜ್ ಅಮರಗೋಳ ಆಕ್ಷೇಪ.

Contractor Basavaraj Amargola
ಗುತ್ತಿಗೆದಾರ ಬಸವರಾಜ್ ಅಮರಗೋಳ
author img

By

Published : Dec 16, 2022, 2:09 PM IST

Updated : Dec 16, 2022, 4:17 PM IST

ಗುತ್ತಿಗೆದಾರ ಬಸವರಾಜ್ ಅಮರಗೋಳ

ಹುಬ್ಬಳ್ಳಿ: ಚಿಕ್ಕಮಗಳೂರು ಜಿಲ್ಲೆ ಕಡೂರು ಮತ್ತು ಮೂಡಿಗೆರೆ ತಾಲೂಕಿನ ಗ್ರಾಪಂಗಳಿಗೆ ಕೋವಿಡ್ ಪರಿಕರಗಳನ್ನು ಸರಬರಾಜು ಮಾಡಿದ್ದು, 2 ವರ್ಷ ಗತಿಸಿದರೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಬಿಲ್ ಪಾವತಿಸಿಲ್ಲ ಎಂದು ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ್ ಅಮರಗೋಳ ಆರೋಪಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಲಗಾರರ ಕಾಟ ಹೆಚ್ಚಾಗಿದೆ. ನನಗೆ ಸಾಲಗಾರರು ಕಿರುಕುಳ ನೀಡುತ್ತಿದ್ದು, ನನ್ನ ಜೀವಕ್ಕೆ ಅಪಾಯವಿದೆ. ನನಗೆ ಏನಾದರೂ ಹಾನಿ ಉಂಟಾದರೆ ತಾಪಂ ಅಧಿಕಾರಿಗಳೇ ಹೊಣೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬಿಲ್ ಪಾವತಿಸದೇ ಸತಾಯಿಸುವುದರ ವಿರುದ್ದ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿರುವೆ. ಈಗ ರಾಷ್ಟ್ರಪತಿಗಳ ಭವನದಿಂದ ಬಿಲ್ ಪಾವತಿ ಮಾಡಲು ಆದೇಶ ಬಂದರೂ ಅಧಿಕಾರಿಗಳು ಹಣ ಪಾವತಿಸಿಲ್ಲ. ಈಗ ಸಾಲಗಾರರ ಕಾಟ ಹೆಚ್ಚಾಗಿದೆ. ನನ್ನ ಜೀವಕ್ಕೆ ಹಾನಿಯಾದರೆ ಕಡೂರು ಹಾಗೂ ಮೂಡಿಗೆರೆ ತಾಪಂ ಇಒಗಳು ಕಾರಣ ಎಂದು ಗುತ್ತಿಗೆದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೋವೀಡ್ ಸಂದರ್ಭದಲ್ಲಿ ಕಾಮಗಾರಿಗೆ ಸಾಮಗ್ರಿಗಳನ್ನು ಪೂರೈಕೆ ಮಾಡಿರುವೆ. ಆದರೆ, ನಾನು ಸರಬರಾಜು ಮಾಡಿದ ಸಾಮಗ್ರಿಗಳಿಗೆ ಯಾವುದೇ ರೀತಿಯ ಹಣ ಪಾವತಿ ಮಾಡಿರಲಿಲ್ಲ. ಕಚೇರಿಗೆ ಅಲೆದು ಅಲೆದು ಕೊನೆಗೆ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿರುವೆ. ನಂತರ ರಾಷ್ಟ್ರಪತಿಗಳ ಭವನದಿಂದ ಹಣ ಪಾವತಿಗೆ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ. ಇದುವರೆಗೆ ಹಣ ಪಾವತಿ ಮಾಡಿಲ್ಲ ಎಂದು ತಾಪಂ ಇಒಗಳ ವಿರುದ್ಧ ಬಸವರಾಜ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂಓದಿ:ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ ಪೊಲೀಸರು

Last Updated : Dec 16, 2022, 4:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.