ETV Bharat / state

ನಾನು ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದೆ: ವಿನಯ್​ಗೆ ಜೋಶಿ ಟಾಂಗ್​

ಲಾಠಿ ಏಟು ತಿಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಹೊರತು ಅವರಂತೆ ಕೊಲೆ ಕೇಸ್​ನಲ್ಲಿ ಸಿಲುಕಿ ಜೈಲಿಗೆ ಹೋದವನಲ್ಲ ಎಂದು ಹಾಲಿ ಸಂಸದ ಪ್ರಹ್ಲಾದ್​ ಜೋಶಿ ಮಾಜಿ ಸಚಿವ ವಿನಯ್​ ಕುಲಕರ್ಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ವಾಗ್ದಾಳಿ ನಡೆಸಿದ ಹಾಲಿ ಸಂಸದ ಪ್ರಹ್ಲಾದ ಜೋಶಿ
author img

By

Published : Apr 26, 2019, 4:56 PM IST

ಧಾರವಾಡ: ಹೋರಾಟದ ಸಂದರ್ಭದಲ್ಲಿ ನಾನು ಜೈಲಿಗೆ ಹೋಗಿದ್ದೆ. ಕಾಂಗ್ರೆಸ್​​ ಅಭ್ಯರ್ಥಿಯಂತೆ ನಾನಲ್ಲ. ಅವರು ಕೊಲೆ ಕೇಸ್​ ಸಂಬಂಧಿಸಿದಂತೆ ರಾಜಿ ಮಾಡಿಸಲು ಜೈಲಿಗೆ ಹೋಗಿದ್ದರು. ಹಿಂದೆ ಈದ್ಗಾ ವಿವಾದದ ವೇಳೆ ನನ್ನನ್ನು 15 ದಿನ ಜೈಲಿಗೆ ಹಾಕಿದ್ದರು ಎಂದು ಸಂಸದ ಪ್ರಹ್ಲಾದ್​ ಜೋಶಿ ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಟಾಂಗ್​ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ ಪೊಲೀಸರು ವೀರಪ್ಪ ಮೊಯ್ಲಿ ಅವರ ಮಾತು ಕೇಳಿ ನನ್ನನ್ನು ಜೈಲಿಗೆ ಹಾಕಿದ್ದರು. ಆದರೆ, ನಾನು ರಾಜಿ ಮಾಡಿಸಲು ಜೈಲಿಗೆ ಹೋಗಿಲ್ಲ, ರಾಷ್ಟ್ರ ಧ್ವಜದ ಹೋರಾಟದಲ್ಲಿ ಜೈಲಿಗೆ ಹೋಗಿದ್ದೆ. ಆಗಲೇ ಜನ ನನ್ನ ನಾಯಕತ್ವ ಗುರುತಿಸಿದರು. ಹೀಗಾಗಿ ಮೂರು ಬಾರಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಪೊಲೀಸರು ನಮ್ಮನ್ನು ಲಾಠಿಯಿಂದ ಹೊಡೆದಿದ್ದಕ್ಕೆ ಬಿಜೆಪಿ ಅಷ್ಟು ಗಟ್ಟಿಯಾಗಿದೆ ಎಂದರು.

ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ವಾಗ್ದಾಳಿ ನಡೆಸಿದ ಹಾಲಿ ಸಂಸದ ಪ್ರಹ್ಲಾದ್​ ಜೋಶಿ

ಶೃತಿ ಬೆಳ್ಳಕ್ಕಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಪ್ರಕರಣ ಸೈಬರ್ ಕ್ರೈಂ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಈ ಪ್ರಕರಣವನ್ನು ಅವರಿಗೆ ವಹಿಸಬೇಕಿತ್ತು. ಎಸ್​ಪಿ ಯಾವ ಅಧಿಕಾರದ ಮೇಲೆ ಅವರನ್ನು ಬಂಧಿಸಿದ್ದಾರೆ ಗೊತ್ತಿಲ್ಲ. ಎಂ.ಬಿ.ಪಾಟೀಲ್ ಒತ್ತಡಕ್ಕೆ ಮಣಿದು ಹೀಗೆಲ್ಲ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಧಾರವಾಡ: ನಾನು ಜೈಲಿಗೆ ಹೋರಾಟದ ಸಂದರ್ಭದಲ್ಲಿ ಹೋಗಿದ್ದೆ. ಕಾಂಗ್ರೆಸ್ ಅಭ್ಯರ್ಥಿಯಂತೆ ನಾನಲ್ಲ, ಅವರು ಕೊಲೆ ಕೇಸ್ ಸಂಬಂಧಿಸಿದಂತೆ ರಾಜಿ ಮಾಡಿಸಲು ಜೈಲಿಗೆ ಹೋಗಿದ್ದರು ಹಿಂದೆ ಈದ್ಗಾ ವಿವಾದದ ವೇಳೆ ೧೫ ದಿನ ಜೈಲಿಗೆ ಹಾಕಿದ್ದರು ಎಂದು ಸಂಸದ ಪ್ರಲ್ಹಾದ ‌ಜೋಶಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಟಾಂಗ್ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮುಗಿದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಆಗ ಪೊಲೀಸರು ವೀರಪ್ಪ ಮೊಯ್ಲಿ ಮಾತು ಕೇಳಿ ಜೈಲಿಗೆ ಹಾಕಿದ್ದರು. ಆದರೆ ನಾನು ರಾಜಿ ಮಾಡಿಸಲು ಜೈಲಿಗೆ ಹೋಗಿಲ್ಲ ರಾಷ್ಟ್ರ ಧ್ವಜದ ಹೋರಾಟದಲ್ಲಿ ಜೈಲಿಗೆ ಹೋಗಿದ್ದೆ. ಆಗಲೇ ಜನ ನನ್ನ ನಾಯಕತ್ವ ಗುರುತಿಸಿದರು ಹೀಗಾಗಿ ಮೂರು ಬಾರಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಈ ಬಾರಿಯೂ ನನ್ನ ಆಯ್ಕೆ ಮಾಡುತ್ತಾರೆ ಎಂದು ವಿನಯ ಕುಲಕರ್ಣಿಗೆ ಟಾಂಗ್ ‌ನೀಡಿದ್ದಾರೆ.Body:ನಾನು ಹೆದರುವ ಅವಶ್ಯಕತೆಯೇ ಇಲ್ಲ
ಪೋಲಿಸರು ನಮ್ಮನ್ನು ಲಾಠಿಯಿಂದ ಹೊಡೆದಿದ್ದಕ್ಕೇ ಬಿಜೆಪಿ ಅಷ್ಟು ಗಟ್ಟಿಯಾಗಿದೆ. ಶೃತಿ ಬೆಳ್ಳಕ್ಕಿ ಬಂಧನ ಪ್ರಕರಣಕ್ಕೆ ಸಂಬಂದಿಸಿದಂತೆ ಇದು ಸೈಬರ್ ಕ್ರೈಮ್ ಪೊಲೀಸರ ವ್ಯಾಪ್ತಿ
ಪ್ರಕರಣವನ್ನು ಅವರಿಗೆ ವಹಿಸಬೇಕಿತ್ತು. ಎಸ್.ಪಿ ಯಾವ ಅಧಿಕಾರದ ಮೇಲೆ ಬಂಧನ ಮಾಡಿದ್ರು?, ಎಂ.ಬಿ. ಪಾಟೀಲ್ ಒತ್ತಡಕ್ಕೆ ಮಣಿದು ಹೀಗೆಲ್ಲ ಮಾಡಿದ್ದಾರೆ. ನೀವು ಗೃಹ ಸಚಿವ ಎಂ.ಬಿ. ಪಾಟೀಲರ ಅಧಿಕಾರಿ ಅಲ್ಲ, ನೀವು ಸರ್ಕಾರದ ಅಧಿಕಾರಿ ಪೊಲೀಸರಿಗೆ ಭಗವಾನ್ ಮೇಲೆ ಕೇಸ್ ಹಾಕಲು ಆಗಿಲ್ಲ, ಸಾಕ್ಷಿ ನಾಶ ಮಾಡಲು ಹೋದ ಮಾಜಿ ಮಂತ್ರಿ ಕೇಸ್‌ನಲ್ಲಿ ಕ್ರಮ ಕೈಗೊಳ್ಳಲು ಆಗಿಲ್ಲ ಎಂದು ಹರಿಹಾಯ್ದರು.

ಸಾಮಾನ್ಯ ಮಹಿಳೆಯ ಮೇಲೆ ಕೇಸು ಮಾಡಲು ಸಾಧ್ಯವಾಗುತ್ತೆ. ಈ ಪ್ರಕರಣವನ್ನು ಸೈಬರ್ ಕ್ರೈಮ್ ಗೆ ರೆಫರ್ ಮಾಡಬೇಕಿತ್ತು. ಆದರೆ ಹಾಗೆ ಮಾಡದೇ ಬಂಧನ ಮಾಡಲಾಗಿದೆ. ಕಾನೂನು ಯಾರ ಮನೆಯದ್ದೂ ಅಲ್ಲ
ನಾವು ರಾಜ್ಯಪಾಲರ ಬಳಿ ಹೋಗುತ್ತೇವೆ
ದಾದಾಗಿರಿ, ಗೂಂಡಾಗಿರಿ ಇಲ್ಲಿ ನಡೆಯೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.