ಹುಬ್ಬಳ್ಳಿ : ಪತಿಯ ಸಾವಿನ ದುಃಖ ತಾಳಲಾರದೆ ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.
ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯ ನಿವಾಸಿ ಫೆರಿದ್ಧೀನ್ ಇಮಾಮಸಾಬ್ ಪಠಾಣ್ (74) ಎಂಬುವವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದರು. ಇವರ ಅಂತ್ಯಸಂಸ್ಕಾರ ಮುಗಿಸಿಕೊಂಡು ಕುಟುಂಬಸ್ಥರು, ಸಂಬಂಧಿಗಳು ಮನೆಗೆ ಮರಳಿತ್ತಿದ್ದರು.
ಈ ವೇಳೆ ಫೆರಿದ್ಧೀನ್ ಅವರ ಪತ್ನಿ ಹುಸೇನಬಿ ಫೆರುದ್ಧೀನ್ ಪಠಾಣ್ (70) ಪತಿಯ ಸಾವಿನ ದು:ಖ ತಾಳಲಾರದೆ ಇಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ.
ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದ್ದು, ಸಾವಿನಲ್ಲೂ ಒಂದಾದ ಸತಿ- ಪತಿಗಳ ಹೊಂದಾಣಿಕೆಗೆ ಇಡೀ ಕುಂದಗೋಳ ಪಟ್ಟಣವೇ ಕಂಬನಿ ಮಿಡಿಯುತ್ತಿದೆ.