ಹುಬ್ಬಳ್ಳಿ: ರಾಜ್ಯ ಸರ್ಕಾರದ ಆದೇಶದಂತೆ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 5 ರಂದು ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಹುಬ್ಬಳ್ಳಿ ವಿಭಾಗದಲ್ಲಿ ಲಾಕ್ಡೌನ್ಗೂ ಮೊದಲು ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳಿಗೆ ನಿತ್ಯ 419 ಬಸ್ಗಳು ಸಂಚರಿಸುತ್ತಿದ್ದು, ಸರಾಸರಿ 1.35 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಲಾಕ್ಡೌನ್ ತೆರವಿನ ಬಳಿಕ ನಿತ್ಯ ಜಿಲ್ಲೆಯ ಒಳಗಡೆ ಮತ್ತು ಅಂತರ್ ಜಿಲ್ಲಾ ಕೇಂದ್ರಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರತಿದಿನ ಸರಾಸರಿ 200 ಬಸ್ಗಳು ಸಂಚರಿಸುತ್ತಿದ್ದು, ಸರಾಸರಿ 22,000ರಿಂದ 23,000 ಜನರು ಪ್ರಯಾಣ ಮಾಡುತ್ತಿದ್ದಾರೆ.
ಸರ್ಕಾರದ ನಿರ್ದೇಶನಗಳಂತೆ ಭಾನುವಾರ ಇಡೀ ದಿನ ಯಾವುದೇ ಬಸ್ಗಳನ್ನ ರಸ್ತೆಗಿಳಿಸದಿರಲು ಸಂಸ್ಥೆ ನಿರ್ಧರಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ್ ತಿಳಿಸಿದ್ದಾರೆ.