ETV Bharat / state

ಲಂಡನ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿ ಟೆಕಿ ಶವ ಇಂದು ಬೆಂಗಳೂರಿಗೆ ರವಾನೆ - ಬೆಂಗಳೂರು

ಮಾರ್ಚ್​ 13ರಂದು ಲಂಡನ್‌ನಲ್ಲಿ ಹುಬ್ಬಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್​ ಗದಿಗೆಪ್ಪ ಗೌಡರ್ ಆತ್ಮಹತ್ಯೆಗೆ ಶರಣಾಗಿದ್ದರು.

ಹುಬ್ಬಳ್ಳಿ ಟೆಕ್ಕಿ
ಗದಿಗೆಪ್ಪ ಗೌಡರ್
author img

By

Published : May 10, 2020, 7:27 PM IST

ಹುಬ್ಬಳ್ಳಿ : 59 ದಿನದ ಹಿಂದೆ ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಹುಬ್ಬಳ್ಳಿ ಟೆಕಿ ಶವ ಇಂದು ತಡರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ನಾಳೆ ಹುಬ್ಬಳ್ಳಿ ತಲುಪಲಿದೆ.

ಹುಬ್ಬಳ್ಳಿಯಲ್ಲಿರುವ ಟೆಕ್ಕಿ ನಿವಾಸ

ಹುಬ್ಬಳ್ಳಿಯ ನವನಗರ ನಿವಾಸಿಯಾಗಿರುವ ಯುವಕನ ತಂದೆ-ತಾಯಿಗೆ ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ಹುಬ್ಬಳ್ಳಿಯಲ್ಲಿಯೇ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದರು. ಆದ್ರೆ ಅಷ್ಟೊತ್ತಿಗಾಗಲೇ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಲಂಡನ್​ನಿಂದ ಭಾರತಕ್ಕೆ ಶವ ತರಲು ಸಾಧ್ಯವಾಗಿರಲಿಲ್ಲ. ಮಗನ ಶವವನ್ನು ಕೊನೆಯದಾಗಿ ನೋಡುವುದಕ್ಕೆ ಕಳೆದ 59 ದಿನಗಳಿಂದ ಹುಬ್ಬಳ್ಳಿಯಲ್ಲಿರುವ ಪೋಷಕರು ಕಾಯುತ್ತಿದ್ದರು. ಭಾರತಕ್ಕೆ ಶವ ತರುವುದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ರೂ ಕೊನೆಗೆ ಇಂದು ತಡರಾತ್ರಿ ಮಗನ ಶವ ಬೆಂಗಳೂರಿಗೆ ಆಗಮಿಸುತ್ತಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಲಂಡನ್​ನಲ್ಲಿರುವ ನೀರಜ್ ಪಾಟೀಲ್ ಅವರನ್ನು ಸಂಪರ್ಕ ಮಾಡಿದ ಟೆಕಿ ಕುಟುಂಬ, ಶವವನ್ನು ಭಾರತಕ್ಕೆ ತರಿಸುವಂತೆ ಮನವಿ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.