ETV Bharat / state

ಮಂಗಳಮುಖಿಯರ ಸಂಕಷ್ಟಕ್ಕೆ ಸ್ಪಂದಿಸಿದ ಹುಬ್ಬಳ್ಳಿ ರೌಂಡ್ ಟೇಬಲ್‌ ಸಂಸ್ಥೆ - ಮಂಗಳಮುಖಿಯರಿಗೆ ಸಹಾಯ

ಕೋವಿಡ್​​ ಹೊಡೆತದಿಂದ ಸಂಕಷ್ಟಕ್ಕೊಳಗಾಗಿದ್ದ ಮಂಗಳಮುಖಿಯರಿಗೆ ಹುಬ್ಬಳ್ಳಿ ರೌಂಡ್ ಟೇಬಲ್‌ ಸಂಸ್ಥೆ ಮತ್ತು ಲೇಡಿಸ್ ಸರ್ಕಲ್ ಸಂಸ್ಥೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದೆ.

hubli round table organaisation helps transgenders
ಮಂಗಳಮುಖಿಯರ ಸಂಕಷ್ಟಕ್ಕೆ ಸ್ಪಂದಿಸಿದ ಹುಬ್ಬಳ್ಳಿ ರೌಂಡ್ ಟೇಬಲ್‌ ಸಂಸ್ಥೆ
author img

By

Published : Oct 29, 2020, 5:59 PM IST

ಹುಬ್ಬಳ್ಳಿ: ಮಹಾಮಾರಿ ಕೋವಿಡ್​​​ ದೇಶದ ಪ್ರತೀ ಕ್ಷೇತ್ರದ ಮೇಲೂ ತನ್ನ ಕರಿಛಾಯೆ ಬೀರಿದೆ. ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಸಮಸ್ಯೆ ಎದುರಿಸಿದ್ದಾರೆ. ಭಿಕ್ಷುಕರು, ಕೈಲಾಗದವರ ಸ್ಥಿತಿಯಂತೂ ಇನ್ನೂ ಗಂಭೀರವಾಗಿದ್ದು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಇದರಿಂದ ಮಂಗಳಮುಖಿಯರು ಕೂಡ ಹೊರತಾಗಿಲ್ಲ. ಸಂಕಷ್ಟಕ್ಕೊಳಗಾಗಿದ್ದ ಮಂಗಳಮುಖಿಯರಿಗೆ ಹುಬ್ಬಳ್ಳಿ ರೌಂಡ್ ಟೇಬಲ್‌ ಸಂಸ್ಥೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದೆ.

ಮಂಗಳಮುಖಿಯರ ಸಂಕಷ್ಟಕ್ಕೆ ಸ್ಪಂದಿಸಿದ ಹುಬ್ಬಳ್ಳಿ ರೌಂಡ್ ಟೇಬಲ್‌ ಸಂಸ್ಥೆ

ಹುಬ್ಬಳ್ಳಿ ರೌಂಡ್ ಟೇಬಲ್‌ ಸಂಸ್ಥೆ ಸುಮಾರು ವರ್ಷಗಳಿಂದ ನಿರ್ಗತಿಕರಿಗೆ ಹಾಗೂ ಅನಾಥರಿಗೆ ನೆರವು ಒದಗಿಸಿದೆ. ಕೊರೊನಾ ಸಂದರ್ಭದಲ್ಲಿ ಮಂಗಳಮುಖಿಯರ ಸಂಕಷ್ಟದ ಪರಿಸ್ಥಿತಿಯನ್ನರಿತು ಅವರಿಗೂ ದವಸ, ಧಾನ್ಯ, ಅಕ್ಕಿ, ಅಡುಗೆ ಎಣ್ಣೆ, ದಿನಸಿ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಮಂಗಳ ಮುಖಿಯರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ‌. ಆರೋಗ್ಯ ತಪಾಸಣೆ ಜೊತೆಗೆ ಆಹಾರ ಕಿಟ್ ವಿತರಿಸಿದ್ದಾರೆ.

ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ನಮ್ಮನ್ನು ಕಂಡು ಹಲವು ಸಂಘ ಸಂಸ್ಥೆಗಳು ಸಹಾಯ ಮಾಡಿದೆ. ಅದೇ ರೀತಿ ಹುಬ್ಬಳ್ಳಿ ರೌಂಡ್ ಟೇಬಲ್ ಹಾಗೂ ಲೇಡಿಸ್ ಸರ್ಕಲ್ ಸಹ ನಮಗೆ ಸಹಾಯ ಮಾಡಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.