ಹುಬ್ಬಳ್ಳಿ: ಟಿಕೆಟ್ ರಹಿತ/ಕ್ರಮರಹಿತ ಪ್ರಯಾಣ ಮತ್ತು ಅನಧಿಕೃತ ಮಾರಾಟವನ್ನು ತಡೆಗಟ್ಟಿ, ಟಿಕೆಟ್ ಖರೀದಿಸಿ ಪ್ರಯಾಣಿಸುವವರಿಗೆ ಆರಾಮದಾಯಕ, ಸುರಕ್ಷಿತ ಪ್ರಯಾಣ ಮತ್ತು ಉತ್ತಮ ಸೇವೆಯನ್ನು ಸುನಿಶ್ಚಿತಗೊಳಿಸಲು ಹುಬ್ಬಳ್ಳಿ ವಿಭಾಗವು ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ನಿಯಮಿತವಾಗಿ ಟಿಕೆಟ್ ತಪಾಸಣಾ ಅಭಿಯಾನವನ್ನು ನಡೆಸುತ್ತಿದೆ.
ನವೆಂಬರ್ 2022ರಲ್ಲಿ ಟಿಕೆಟ್ ರಹಿತ/ಕ್ರಮರಹಿತ ಪ್ರಯಾಣದ ಒಟ್ಟು 8967 ಪ್ರಕರಣಗಳನ್ನು ಪತ್ತೆ ಹಚ್ಚಿ 60.3 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ 250 ದಿನಗಳಲ್ಲಿ ಹುಬ್ಬಳ್ಳಿ ವಿಭಾಗವು ಟಿಕೆಟ್ ರಹಿತ/ಕ್ರಮರಹಿತ ಪ್ರಯಾಣದ ಒಟ್ಟು 82,679 ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು 6 ಕೋಟಿ ರೂಪಾಯಿಗಳ ಆದಾಯವನ್ನುಗಳಿಸಿದೆ ಎಂದು ಹುಬ್ಬಳ್ಳಿ ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹರೀತಾ ಎಸ್. ತಿಳಿಸಿದ್ದಾರೆ.
ಇದನ್ನೂ ಓದಿ: ವಾಹನ ಸವಾರರ ಮೇಲೆ ಹೊಸ ಅಸ್ತ್ರ: ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆಗೆ ಕ್ರಮ