ಹುಬ್ಬಳ್ಳಿ: ದುರ್ಗದಬೈಲ್ ಎಂಬಲ್ಲಿ ನಡೆದ ಬೆಳ್ಳಿ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧ ಇಬ್ಬರು ಅಂತರರಾಜ್ಯ ಕಳ್ಳರನ್ನು ಶಹರ್ ಠಾಣೆಯ ಪೋಲಿಸರು ಅರೆಸ್ಟ್ ಮಾಡಿದ್ದಾರೆ.
ಹುಬ್ಬಳ್ಳಿಯ ದುರ್ಗದಬೈಲ್ ನ ನಾರಾಯಣ ಇಳಕಲ್ ಎಂಬುವವರ ಅಂಗಡಿಯಲ್ಲಿ ಸುಮಾರು 3 ಲಕ್ಷ 50 ಸಾವಿರ ನಗದು, 39 ಕೆಜಿ ಬೆಳ್ಳಿ ಆಭರಣ ಕಳ್ಳತನ ಪ್ರಕರಣ ನಡೆದಿತ್ತು. ಈ ಸಂಬಂಧ ನಗರದ ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನಟ್ಟಿದ ಪೋಲಿಸರು ಹುಬ್ಬಳ್ಳಿಯ ಗಬ್ಬರೂ ಬಳಿ ಕಳ್ಳರನ್ನು ಬಂಧಿಸಿದ್ದಾರೆ. ರಾಜಸ್ತಾನ ಮೂಲದ ಮುಖೇಶ್ ಸಾರನ್, ಬೆಂಗಳೂರು ಮೂಲದ ಭುಂದುರಾಮ್ ಡಯ್ಯಾ ಬಂಧಿತರು.
ಬಂಧಿತರಿಂದ 11/2 ಬೆಳ್ಳಿ , ಕೃತ್ಯಕ್ಕೆ ಬಳಸಿದ ಮಾರುತಿ ಕಾರು ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಶೋಧ ಮುಂದುವರೆದಿದೆ.