ETV Bharat / state

ಕಾರ್ಖಾನೆಗಳ ಹೊಗೆಯಿಂದ ಕಂಗಾಲಾದ ಹುಬ್ಬಳ್ಳಿ ಜನತೆ... ಮಕ್ಕಳನ್ನು ಕಾಡುತ್ತಿದೆ ಅಸ್ತಮಾ! - ಹೊಗೆಯಿಂದ ಕಂಗಾಲಾದ ಹುಬ್ಬಳ್ಳಿ ಜನತೆ

ಮಾತ್ರೆಗಳಿಗೆ ಬಳಸುವ ರಾಪರ್​ ಸುಡುವ ಕೈಗಾರಿಕಾ ಘಟಕದಿಂದ ಅಪಾಯಕಾರಿ ಅನಿಲ ಹೊರಬರುತ್ತಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಫ್ಯಾಕ್ಟರಿಗಳನ್ನು ಸ್ಥಳಾಂತರ ಮಾಡಿ ರೋಗಗಳಿಂದ ಮುಕ್ತಿ ದೊರಕಿಸಬೇಕು ಎಂದು ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಕಾರ್ಖಾನೆ
ಕಾರ್ಖಾನೆ
author img

By

Published : Dec 17, 2020, 7:24 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಖಾರ್ಕಾನೆಗಳಿಂದ ಹೊರ ಬರುವ ಕಪ್ಪು ಧೂಳು ಹಾಗೂ ಹಾನಿಕಾರಕ ಹೊಗೆಯಿಂದ ಮಕ್ಕಳು, ವಯೋವೃದ್ಧರಲ್ಲಿ ಹಲವು ರೀತಿಯ ಕಾಯಿಲೆಗಳು ಕಾಣಿಸುತ್ತಿದ್ದು, ಜನರು ಭಯಭೀತರಾಗಿದ್ದಾರೆ.

ನಗರದ ಮಧ್ಯದಲ್ಲಿ ಹಲವು ದೊಡ್ಡ ದೊಡ್ಡ ಕೈಗಾರಿಕೆಗಳು ತಲೆ ಎತ್ತಿವೆ. ವಾರ್ಡ್ ನಂ. 64ರಲ್ಲಿ ಬರುವ ರಜಾ ಟೌನ್, ಗೌಷಿಯಾ ನಗರ, ಗೌಷಿಯಾ ಟೌನ್ ಏರಿಯಾಗಳಲ್ಲಿನ ಅವಲಕ್ಕಿ, ಬಿಸ್ಕೆಟ್ ಖಾರ್ಕಾನೆಗಳು ವಿಷಕಾರಿ ಅನಿಲ ಹಾಗೂ ಕಪ್ಪು ಬೂದಿಯನ್ನು ಹೊರ ಸೂಸುತ್ತಿವೆ. ಇದು ಮಕ್ಕಳು, ವಯೋವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಅಸ್ತಮಾ, ಕಿಡ್ನಿ ವೈಫಲ್ಯದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಕಾರ್ಖಾನೆಗಳ ಹೊಗೆಯಿಂದ ಕಂಗಾಲಾದ ಹುಬ್ಬಳ್ಳಿ ಜನತೆ

ಇನ್ನೂ ವಾರ್ಡ್ ನಂ. 59, 64, 65ರಲ್ಲಿ ಹತ್ತಾರು ಕೈಗಾರಿಕೆಗಳು ಕಾರ್ಯನಿರ್ವಹಣೆ ಮಾಡುತ್ತಿರುವುದರಿಂದ ಸ್ಥಳೀಯರಿಗೆ ಉಸಿರಾಡುವುದೇ ಕಷ್ಟವಾಗಿದೆ. ಮಾತ್ರೆಗಳಿಗೆ ಬಳಸುವ ರಾಪರ್​ ಸುಡುವ ಮತ್ತೊಂದು ಕೈಗಾರಿಕಾ ಘಟಕ ಇಲ್ಲೇ ಇರುವುದರಿಂದ ಅಪಾಯಕಾರಿ ಅನಿಲ ಹೊರಬರುತ್ತಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಫ್ಯಾಕ್ಟರಿಗಳನ್ನು ಸ್ಥಳಾಂತರ ಮಾಡಿ ರೋಗಗಳಿಂದ ಮುಕ್ತಿ ದೊರಕಿಸಬೇಕು ಎಂದು ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.