ETV Bharat / state

ಹು-ಧಾ ಪಾಲಿಕೆ ವಾರ್ಡ್​ ಮರು ವಿಂಗಡಣೆ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ - Hubli latest news

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ್​ಗಳ ಸಂಖ್ಯೆ, ಚುನಾವಣೆ ದಿನಾಂಕ ಇತ್ಯರ್ಥವಾಗುವ ಸಮಯ ಸಮೀಪಿಸುತ್ತಿದೆ.

hubli-dharwad
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
author img

By

Published : Feb 3, 2021, 6:46 PM IST

ಹುಬ್ಬಳ್ಳಿ: ಮಹಾನಗರ ಪಾಲಿಕೆ ವಾರ್ಡ್ ಮರು ವಿಂಗಡಣೆಯ ಕಸರತ್ತು ಮುಗಿದಿದ್ದು, ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಇದರಿಂದ ಅವಳಿ ನಗರದಲ್ಲಿ ವಾರ್ಡ್​ಗಳ ಸಂಖ್ಯೆ, ಚುನಾವಣೆ ದಿನಾಂಕ ಇತ್ಯರ್ಥವಾಗುವ ಸಮಯ ಸಮೀಪಿಸುತ್ತಿದೆ.

ಈ ಹಿಂದಿನ ಚುನಾವಣೆಯಲ್ಲಿ 67 ವಾರ್ಡ್​ಗಳಿದ್ದವು. 2017ರಲ್ಲಿ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಜರುಗಿಸಿದಾಗ, ವಾರ್ಡ್ ಸಂಖ್ಯೆಯನ್ನು 67ರಿಂದ 82ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು. ವಾರ್ಡ್ ಮರು ವಿಂಗಡಣೆಯಲ್ಲಿ ಲೋಷದೋಷಗಳಿರುವುದನ್ನು ಪ್ರಶ್ನಿಸಿ ಅನೇಕರು ನ್ಯಾಯಾಲಯದ ಮೊರೆ ಹೋದರು. ಹೀಗಾಗಿ ಮತ್ತೆ ವಾರ್ಡ್ ವಿಂಗಡಣೆಗೆ ನ್ಯಾಯಾಲಯದ ಆದೇಶಿಸಿದೆ. ಈಗ ಪಾಲಿಕೆ ಅಧಿಕಾರಿಗಳು ಈ ಕುರಿತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ, ಈ ಸಂಖ್ಯೆ 82ಕ್ಕೆ ಏರುವ ಸಾಧ್ಯತೆ ಅಧಿಕವಾಗಿದೆ. ಆದರೂ ಈ ಸಂಖ್ಯೆಯಲ್ಲಿ ಅಲ್ಪ ಕುಸಿತ ಆಗಬಹುದಾಗಿದೆ.

ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಡಿಸೆಂಬರ್ 17 (2020)ರಂದು ನೀಡಿದ ತೀರ್ಪಿನನ್ವಯ ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಜರುಗಿಸಲಾಗಿದೆ. ನ್ಯಾಯಾಲಯದ ಆದೇಶವು ಪಾಲಿಕೆ ಅಧಿಕಾರಿಗಳಿಗೆ ತಡವಾಗಿ ಕೈ ಸೇರಿತ್ತು. ನಗರಾಭಿವೃದ್ಧಿ ಇಲಾಖೆಯ ಮಾರ್ಗಸೂಚಿಯನ್ವಯ ಒಂದು ತಿಂಗಳ ಅವಧಿಯೊಳಗೆ ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಚುನಾವಣೆ ನಡೆಯದೇ ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳು ಇಲ್ಲದೇ ಮಹಾನಗರದ ಅಭಿವೃದ್ಧಿಗೆ ಸಾಕಷ್ಟು ಸಮಸ್ಯೆ ಉಂಟಾಗಿರುವ ಬೆನ್ನಲ್ಲೇ ವಾರ್ಡ್ ಮರು ವಿಂಗಡಣೆ ಕಾರ್ಯವನ್ನು ಶೀಘ್ರವಾಗಿ ಮುಗಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಬಹುದಿನದ ನಿರೀಕ್ಷೆಯ ಪಾಲಿಕೆ ಚುನಾವಣೆ ಶೀಘ್ರವಾಗಿ ನಡೆಯುವ ಸಾಧ್ಯತೆ ಹೆಚ್ಚಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.