ETV Bharat / state

Hubli Dharwad Corporation Election: ಹು-ಧಾ ಮಹಾನಗರ ಪಾಲಿಕೆ ಕೈ ವಶ ಮಾಡಿಕೊಳ್ಳಲು ಶೆಟ್ಟರ್ ಗೆ ಟಾಸ್ಕ್ ಕೊಟ್ಟ ಡಿ ಕೆ ಶಿವಕುಮಾರ್ - ​ ಈಟಿವಿ ಭಾರತ್​ ಕರ್ನಾಟಕ

ಹು- ಧಾ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುತ್ತಿದೆ.

ಡಿಸಿಎಂ ಡಿ.ಕೆ ಶಿವಕುಮಾರ್
ಡಿಸಿಎಂ ಡಿ.ಕೆ ಶಿವಕುಮಾರ್
author img

By

Published : Jun 13, 2023, 4:29 PM IST

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಕಾವು ಈಗಾಗಲೇ ರಂಗೇರಿದೆ. ಕಮಲ ಪಾಳೆಯದಲ್ಲಿದ್ದ ಅಧಿಕಾರವನ್ನು ಕಾಂಗ್ರೆಸ್​ ವಶ ಮಾಡಿಕೊಳ್ಳಲು ಕಾಂಗ್ರೆಸ್ ಸರ್ಕಸ್ ನಡೆಸಿದ್ದು, ಮಾಜಿ ಸಿಎಂ ಜಗದೀಶ್​ ಶೆಟ್ಟರ್‌ ಅವರಿಗೆ ಉಪಮುಖ್ಯಂತ್ರಿ ಡಿ ಕೆ ಶಿವಕುಮಾರ್ ಟಾಸ್ಕ್ ನೀಡಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇದೇ ತಿಂಗಳ ಜೂನ್​ 20ರಂದು ನಡೆಯಲಿರುವ ಮಹಾನಗರ ಪಾಲಿಕೆಗೆ ಮೇಯರ್, ಉಪಮೇಯರ್ ಚುನಾವಣೆಗೆ ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನಂಬರ್ ಗೇಮ್ ಇಲ್ಲ. ಆದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಟಿಕೆಟ್​ ಕೈ ತಪ್ಪಿದ್ದ ಹಿನ್ನೆಲೆ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಗೊಂಡಿದ್ದರು. ಆದರೆ ಚುನಾವಣೆಯಲ್ಲಿ ತಮ್ಮ ಶಿಷ್ಯ ಮಹೇಶ್​ ಟೆಂಗಿನಕಾಯಿ ವಿರುದ್ಧ ಶೆಟ್ಟರ್​ ಸೋಲು ಅನುಭವಿಸಿದ್ದರು. ಹೀಗಾಗಿ ಸೋಲಿನ ಸೇಡು ತೀರಿಸಿಕೊಳ್ಳಲು ಇದೇ ಸೂಕ್ತ ಸಮಯ ಎಂದು ಡಿ‌ ಕೆ ಶಿವಕುಮಾರ್​ ಅವರು ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸುವ ಜವಾಬ್ದಾರಿ ನೀಡಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಜಗದೀಶ್ ಶೆಟ್ಟರ್ ಪರವಾಗಿ ಕೆಲ ಬಿಜೆಪಿ ಸದಸ್ಯರು ಇದ್ದಾರೆ ಎನ್ನಲಾಗ್ತಿದೆ.‌ ಅವರು ವಿಧಾನಸಭೆ ಚುನಾವಣೆಯಲ್ಲಿ ಎಲ್ಲೂ ಬಹಿರಂಗವಾಗಿ ಶೆಟ್ಟರ್ ಪರವಾಗಿ ಕೆಲಸ ಮಾಡಿಲ್ಲ. ರಾಜ್ಯದಲ್ಲಿ‌ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಭೇಟಿಯಾದ ಡಿ.ಕೆ.ಶಿವಕುಮಾರ್: ಹೇಳಿದ್ದೇನು?

ಹೀಗಾಗಿ ಶೆಟ್ಟರ್ ಹಿಂಬಾಲಕರಾಗಿರುವ ಕೆಲ ಬಿಜೆಪಿ ಸದಸ್ಯರು ಬಹಿರಂಗವಾಗಿ ಕಾಂಗ್ರೆಸ್ಸಿಗೆ ಬೆಂಬಲಿಸುವ ಸಾಧ್ಯತೆ ಕೂಡ ಇದೆ. ಇನ್ನು, ಪಾಲಿಕೆಯಲ್ಲಿ 82 ಸದಸ್ಯರ ಬಲ ಹೊಂದಿದೆ. ಬಿಜೆಪಿಯ 39, ಕಾಂಗ್ರೆಸ್‍ನ 33 , ಎಐಎಂಐಎಂ ನ 3 , ಜೆಡಿಎಸ್‍ನ 1 ಹಾಗೂ 6 ಜನ ಪಕ್ಷೇತರರಿದ್ದಾರೆ.‌ ಈ ಹಿಂದೆ ಐವರು ಪಕ್ಷೇತರರು ಹಾಗೂ ಜೆಡಿಎಸ್ ನ ಮತ್ತೊಬ್ಬರು ಬಿಜೆಪಿಗೆ ಬೆಂಬಲ ನೀಡಿದ್ದರು. ಮೇಯರ್ -ಉಪ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಪಾಲಿಕೆ ವ್ಯಾಪ್ತಿಯ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಮತ ನೀಡುವ ಅಧಿಕಾರ ಹೊಂದಿದ್ದಾರೆ.

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಚಿವ ಮತ್ತು ಹಾಲಿ ಶಾಸಕ ವಿನಯ್ ಕುಲಕರ್ಣಿ ಗೆಲುವಿನಿಂದ ಕಾಂಗ್ರೆಸ್ ಮತ ಬ್ಯಾಂಕ್ ಸಂಖ್ಯೆ 34ಕ್ಕೆ ಏರಿದೆ. ಅಲ್ಲದೆ ಪಕ್ಷೇತರರರ ಕೂಡ ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಇದೆ. ಜಗದೀಶ್ ಶೆಟ್ಟರ್ ಮ್ಯಾಜಿಕ್ ನಡೆದರೆ ಸುಲಭವಾಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಚುಕ್ಕಾಣಿ ಹಿದಿಯುವ ಸಾಧ್ಯತೆ ಇದೆ.

ಇದನ್ನೂ ಓದಿ : ಶಕ್ತಿ ಯೋಜನೆಯಿಂದ ಹೊರಗುಳಿದ ಚಿಗರಿ: ಹು-ಧಾ ಮಹಿಳೆಯರಿಗೆ ಎಸಿ ಬಸ್ ಪ್ರಯಾಣ ಭಾಗ್ಯವಿಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.