ETV Bharat / state

ಸೋರುತಿಹುದು ಬಸ್​ನ ಮೇಲ್ಛಾವಣಿ... ಪ್ರಯಾಣಿಕರಿಗೆ ಇದೆಂಥ ದುಸ್ಥಿತಿ - Department of Transport

ಹುಬ್ಬಳ್ಳಿಯಿಂದ ಗುಡೇನಕಟ್ಟಿ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಮಳೆಯಲ್ಲಿ ನೆಂದುಕೊಂಡೇ ಊರು ತಲುಪಬೇಕಿದೆ. ಎಲ್ಲೆಂದರಲ್ಲಿ ರಂಧ್ರಗಳಾಗಿರುವ ಬಸ್​ನ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ದಿನನಿತ್ಯ ಮಳೆಯಲ್ಲಿ ತೋಯಿಸಿಕೊಳ್ಳುವ ದುಸ್ಥಿತಿ ಇದೆ.

ಹುಬ್ಬಳ್ಳಿ ಧಾರವಾಡ ಬಸ್​ ಸ್ಥಿತಿ
author img

By

Published : Oct 10, 2019, 8:36 AM IST

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನರು ಮತ್ತೆ ಕಂಗಾಲಾಗಿದ್ದಾರೆ. ಈ ಬಾರಿ ಮನೆ, ಮಠಗಳು ಅಷ್ಟೇ ಅಲ್ಲದೇ ಸಾರಿಗೆ ಸಂಸ್ಥೆಯ ಬಸ್​ ಕೂಡಾ ಸೋರುತ್ತಿದೆ. ಹೀಗಾಗಿ ಸಾರಿಗೆ ಇಲಾಖೆಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಹುಬ್ಬಳ್ಳಿಯಿಂದ ಗುಡೇನಕಟ್ಟಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್​ಗಳ ಪ್ರಯಾಣಿಕರು ಮಳೆಯಲ್ಲಿ ನೆಂದುಕೊಂಡೇ ಪ್ರಯಾಣಿಸಬೇಕಾಗಿದೆ. ಎಲ್ಲೆಂದರಲ್ಲಿ ರಂಧ್ರಗಳಾಗಿರುವ ಬಸ್​ನ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ದಿನನಿತ್ಯ ನೀರಲ್ಲಿ ನೆನೆಯಬೇಕಾದ ದುಸ್ಥಿತಿ ಒದಗಿಬಂದಿದೆ.

ಹುಬ್ಬಳ್ಳಿಯಲ್ಲಿ ಬಸ್​ನ ದುಸ್ಥಿತಿ

ಇನ್ನು, ಪ್ರಯಾಣಿಕರು ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಕೂಡ ಅಧಿಕಾರಿಗಳು ಮಾತ್ರ ಸ್ಪಂದಿಸಿಲ್ಲವಂತೆ. ಮಳೆ ಬರುವ ಸಂದರ್ಭದಲ್ಲಿ ಸುಸಜ್ಜಿತವಾದ ಬಸ್​ ನೀಡುವ ಬದಲು ಈ ರೀತಿಯ ಬಸ್​ ನೀಡಿದ್ದು ಪ್ರಯಾಣಿಸುವುದೇ ದುಸ್ತರವಾಗಿದೆ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ, ಸಮಸ್ಯೆಗೆ ಪರಿಹಾರ ನೀಡುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ.

Intro:HubliBody:ಮಳೆ ತಂದ ಅವಾಂತರ. ಮನೆ ಅಷ್ಟೇ ಅಲ್ಲಾ' ಸಾರಿಗೆ ಬಸ್ ಸಹ ಸೋರುತ್ತಿವೆ

ಹುಬ್ಬಳ್ಳಿ:ಮಳೆರಾಯನ ಅವಾಂತರದಿಂದ ಮನೆಗಳು ಸೋರುವುದು ಸಾಮಾನ್ಯ ಆದರೆ ಈ ಬಾರಿ ಮನೆ ಅಷ್ಟೇ ಅಲ್ಲದೇ ವಾಯುವ್ಯ ಸಾರಿಗೆ ಬಸ್ ಕೂಡಾ ಸೋರುತ್ತಿದೆ.ಜಿಲ್ಲೆಯಲ್ಲಿ ಮತ್ತೆ ಕಳೆದ ಮೂರು ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಜನರು ಮಳೆಗೆ ತತ್ತರಿಸಿ ಹೋಗಿದ್ದಾರೆ. ಈ ಬಾರಿ ಮನೆ, ಮಠಗಳು ಅಷ್ಟೇ ಅಲ್ಲದೇ ಸಾರಿಗೆಯ ಬಸ್ಸು ಕೂಡಾ ಸೋರಲು ಆರಂಭಿಸಿದ್ದು, ಜನರ ಸಾರಿಗೆ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಹೌದು, ಹುಬ್ಬಳ್ಳಿಯಿಂದ ಗುಡೇನಕಟ್ಟಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ಸೇ ಮಳೆಯಿಂದ ಸೋರುತ್ತಿದ್ದು, ಮೊದಲೇ ಅರ್ಧದಷ್ಟು ಹಾಳಾದ ಬಸ್ಸು ಇದೀಗ ಮಳೆಯಿಂದಾಗಿ ಎಲ್ಲೆಂದರಲ್ಲಿ ಸೋರುತ್ತಿದೆ‌. ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮೇಲೆ ಎಲ್ಲೆಂದರಲ್ಲಿ ತುತಾದ ಬಸ್ಸಿನ ಮೇಲ್ಛಾವಣಿಯಿಂದ ಮಳೆಯ ಹನಿಗಳು ಸೋರುತ್ತಿದ್ದು, ಇದರಿಂದಾಗಿ ಪ್ರಯಾಣಿಕರು ಹಾಗೂ ವಿಧ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ಈ ಹಿಂದೆಯೇ ಬಸ್ಸಿನ ಸ್ಥಿತಿಯ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಪ್ರಯಾಣಿಕರು ಮನವಿ ಮಾಡಿದ್ದಾರೆ. ಆದರೆ ಅದನ್ನು ಲೆಕ್ಕಿಸದೆ ಮತ್ತೆ ಹಳೆಯ ಬಸ್ಸುಗಳನ್ನು ಸಂಚರಿಸಲು ಬಿಡುತ್ತಾರೆ. ಇದೀಗ ಮಳೆಗಾಲ ಬೇರೆ ಇಂತಹ ಸಂದರ್ಭಗಳಲ್ಲಿ ಈ ಬಸ್ಸಿನಲ್ಲಿ ಪ್ರಯಾಣಿಸುವುದೇ ದುಸ್ಥುರವಾಗಿ ಬಿಟ್ಟಿದೆ. ಈಗಲಾದರೂ ಸಂಬಂಧಿಸಿದ ಸಾರಿಗೆ ಅಧಿಕಾರಿಗಳು ಇತ್ತ ಪ್ರಯಾಣಿಕರ ಸಮಸ್ಯೆ ಅರಿತು ಉತ್ತಮ ಸ್ಥಿತಿಯ ಬಸ್ಸನ್ನು ಬಿಡಬೇಕು ಎಂದು ಆಗ್ರಹಿಸುತ್ತಾರೆ ಪ್ರಯಾಣಿಕರು.ಒಟ್ಟಿನಲ್ಲಿ ಸರ್ಕಾರ ವರ್ಷ ವರ್ಷ ಕೋಟ್ಯಾಂತರ ರೂಪಾಯಿಯನ್ನು ಸಾರಿಗೆ ಸಂಸ್ಥೆಗಳಿಗೆ ಬಿಡುಗಡೆ ಮಾಡಿ ಸಾರಿಗೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೇ, ಇತ್ತ ಅಧಿಕಾರಿಗಳ ನಿರ್ಲಕ್ಷ್ಯ ತನದಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿರುವುದು ಸುಳ್ಳಲ್ಲಾ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಪ್ರಯಾಣಿಕರ ಸಮಸ್ಯೆ ಬಗೆಹರಿಸಬೇಕಾಗಿದೆ.....

____________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ ಕುಂದಗೋಳConclusion:Yallapap kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.