ETV Bharat / state

ಹುಬ್ಬಳ್ಳಿ ಸಾಹಸಿಗರ ಲಿಮ್ಕಾ ದಾಖಲೆ.. ಅತ್ಯಂತ ಕಡಿಮೆ ಅವಧಿಯಲ್ಲಿ 6 ಸಾವಿರ ಕಿ.ಮೀ ಪ್ರಯಾಣ! - ಹುಬ್ಬಳ್ಳಿಯಲ್ಲಿ ಲಿಮ್ಕಾ ದಾಖಲೆ ಬರೆದ ನಾಲ್ವರು

ಹುಬ್ಬಳ್ಳಿ ಮೂಲದ ಸುಹಾಸ್​ ಕುಲಕರ್ಣಿ, ಸುದೀಪ್,‌ಕುಶಾಲ್ ಬೋಲಮಲ್ ಹಾಗೂ ಶ್ರೀನಿವಾಸ್​​ ಜಾಧವ್​​ ಎಂಬ ನಾಲ್ವರು ಅತ್ಯಂತ ಕಡಿಮೆ ಅವಧಿಯಲ್ಲಿ ಸುವರ್ಣ ಚತುಷ್ಪಥ ರಸ್ತೆಯಲ್ಲಿ ಸುಮಾರು 6 ಸಾವಿರ ಕಿ.ಮೀ ದೂರವನ್ನ ಕಾರಿನಲ್ಲಿ ರೌಂಡ್ಸ್​​ ಹಾಕುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

Hubli based four people made limca book of records
ಲಿಮ್ಕಾ ಬುಕ್ ಆಫ್ ರೆಕಾರ್ಡ್​​​​ ಮಾಡಿದ ಹುಬ್ಬಳ್ಳಿ ನಾಲ್ವರು
author img

By

Published : Oct 11, 2021, 5:38 PM IST

Updated : Oct 11, 2021, 5:44 PM IST

ಹುಬ್ಬಳ್ಳಿ : ಅತ್ಯಂತ ಕಡಿಮೆ ಅವಧಿಯಲ್ಲಿ ಸುವರ್ಣ ಚತುಷ್ಪಥ ಹೆದ್ದಾರಿಯಲ್ಲಿ ‌ಕಾರಿನಲ್ಲಿ ಪ್ರಯಾಣಿಸುವ ಮೂಲಕ ನಾಲ್ವರು ಲಿಮ್ಕಾ ದಾಖಲೆ ಮಾಡಿದ್ದಾರೆ. ಹವ್ಯಾಸಕ್ಕಾಗಿ ನಡೆಯುತ್ತಿದ್ದ ಜಾಲಿ ರೈಡ್ ಈಗ ದಾಖಲೆಗೆ ಪ್ರೇರಣೆಯಾಗಿದೆ.

ಹುಬ್ಬಳ್ಳಿಯ ನಾಲ್ವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ..

ಹುಬ್ಬಳ್ಳಿ ಮೂಲದ ಸುಹಾಸ್​ ಕುಲಕರ್ಣಿ, ಸುದೀಪ್,‌ ಕುಶಾಲ್ ಬೋಲಮಲ್ ಹಾಗೂ ಶ್ರೀನಿವಾಸ್​​ ಜಾಧವ್​​ ಎಂಬ ನಾಲ್ವರು ಅತ್ಯಂತ ಕಡಿಮೆ ಅವಧಿಯಲ್ಲಿ ಸುವರ್ಣ ಚತುಷ್ಪಥ ರಸ್ತೆಯಲ್ಲಿ ಅತೀ ದೀರ್ಘವಾಗಿ ಕಾರಿನ ಮೂಲಕ ಪ್ರಯಾಣ ಮಾಡಿ ದಾಖಲೆ ಮಾಡಿದ್ದಾರೆ.

73 ಗಂಟೆ 53 ನಿಮಿಷಗಳ ಅವಧಿಯಲ್ಲಿ 5,962 ಕಿ.ಮೀ ಪರ್ಯಟನೆ ಮಾಡಿದ್ದಾರೆ. ಈ ಹಿಂದೆ ಇದ್ದ ದಾಖಲೆಯನ್ನು ಬ್ರೇಕ್ ಮಾಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌​​​ನಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.

Limca Book of Record Certificate
ಲಿಮ್ಕಾ ಬುಕ್ ಆಫ್ ರೆಕಾರ್ಡ್ ಪ್ರಮಾಣಪತ್ರ

ಈ ನಾಲ್ವರಲ್ಲಿ ಮೂವರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬರು ಹೈಕೋರ್ಟ್​​ ವಕೀಲರಾಗಿದ್ದಾರೆ. ಮೊದಲೆಲ್ಲ ಸೈಕಲ್, ಬೈಕ್ ಮೂಲಕ ರೈಡಿಂಗ್ ಮಾಡುತ್ತಿದ್ದವರು ಈಗ ಆಡಿ ಕಾರಿನಲ್ಲಿ ಸಾಹಸದ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ. ಮುಂಬೈನಿಂದ ಪ್ರಾರಂಭಗೊಂಡ ಈ ಸಾಹಸದ ಪ್ರಯಾಣ ದೆಹಲಿ, ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈ ಮೆಟ್ರೊ ನಗರದ ಮೂಲಕ ಅಂತ್ಯಗೊಂಡಿತ್ತು.

ಇದನ್ನೂ ಓದಿ: ಅಧಿಕಾರಕ್ಕಾಗಿ ಹಾತೊರೆಯುವ ವ್ಯವಸ್ಥೆಗೆ ಬಂದು ನಿಂತಿದ್ದೇವೆ : ಹೆಚ್. ಡಿ ದೇವೇಗೌಡ

Last Updated : Oct 11, 2021, 5:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.