ETV Bharat / state

ಇನ್ನೊಂದು ಸೇವೆಗೆ ಮುಂದಾದ ಹುಬ್ಬಳ್ಳಿ ಏರ್​​ಪೋರ್ಟ್: ಕೋವಿಡ್‌ ಲಸಿಕೆ ಸಂಗ್ರಹಕ್ಕೆ ಸಿದ್ಧತೆ - Colvid Vaccine Collection at Hubli Airport

ಲಸಿಕೆ ವಿತರಣೆ ಯಾವ ಸಮಯದಲ್ಲಾದರೂ ಆರಂಭವಾಗಬಹುದು. ಇದಕ್ಕೆ ವಿಮಾನ ನಿಲ್ದಾಣಗಳ ನಿರ್ದೇಶಕರು ಸಜ್ಜಾಗಿರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಹಾಗಾಗಿ ನಿಲ್ದಾಣದಲ್ಲಿನ ಕಾರ್ಗೊ ಸೌಲಭ್ಯದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಆದ್ದರಿಂದ ‘ಕೋಲ್ಡ್‌ ಸ್ಟೋರೇಜ್‌’ ನಿರ್ಮಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ತಿಳಿಸಿದರು.

ಹುಬ್ಬಳ್ಳಿ ಏರ್ ಪೋರ್ಟ್
ಹುಬ್ಬಳ್ಳಿ ಏರ್ ಪೋರ್ಟ್
author img

By

Published : Dec 19, 2020, 4:34 PM IST

ಹುಬ್ಬಳ್ಳಿ: ವಿಮಾನ ನಿಲ್ದಾಣದ ಕಾರ್ಗೊ ವಿಭಾಗದಲ್ಲಿ ಕೊರೊನಾ ಸೋಂಕಿಗೆ ಲಸಿಕೆ ಸಂಗ್ರಹ ಮಾಡಲು ‘ಕೋಲ್ಡ್‌ ಸ್ಟೋರೇಜ್‌’ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ, ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ವಿಮಾನ ನಿಲ್ದಾಣಗಳ ಸರಕು ಸಾಗಣೆ ವಿಭಾಗದಲ್ಲಿ ಲಸಿಕೆ ಸಂಗ್ರಹಿಸಿಡಬೇಕು. ಲಸಿಕೆ ವಿತರಣೆ ಯಾವ ಸಮಯದಲ್ಲಾದರೂ ಆರಂಭವಾಗಬಹುದು. ಇದಕ್ಕೆ ವಿಮಾನ ನಿಲ್ದಾಣಗಳ ನಿರ್ದೇಶಕರು ಸಜ್ಜಾಗಿರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಹಾಗಾಗಿ ನಿಲ್ದಾಣದಲ್ಲಿನ ಕಾರ್ಗೊ ಸೌಲಭ್ಯದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಆದ್ದರಿಂದ ‘ಕೋಲ್ಡ್‌ ಸ್ಟೋರೇಜ್‌’ ನಿರ್ಮಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Preparing for Kovid Vaccine Collection at the Station
ಕೋವಿಡ್‌ ಲಸಿಕೆ ಸಂಗ್ರಹ ಕುರಿತ ಮಾಧ್ಯಮ ಪ್ರಕಟಣೆ
ಮಾಧ್ಯಮಗಳೊಂದಿಗೆ ಮಾತನಾಡಿದ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ

ಕೆಲ ದಿನಗಳಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದೆ. ಬಳಿಕ 3ರಿಂದ 4 ಟನ್​ನಷ್ಟು ಲಸಿಕೆ‌ ಸಂಗ್ರಹ ಮಾಡುವಷ್ಟು ಸಾಮರ್ಥ್ಯದ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸಲು ಟೆಂಡರ್‌ ಕರೆಯಲಾಗುವುದು. 2ರಿಂದ 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕೋವಿಡ್‌ ಲಸಿಕೆಯನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಫೆಬ್ರವರಿ ವೇಳೆಗೆ ಸ್ಟೋರೇಜ್‌ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಭರವಸೆಯಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.