ಹುಬ್ಬಳ್ಳಿ : ಈತ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್, ಕರಾಟೆ ಜೊತೆಗೆ ಮಾರ್ಷಲ್ ಆರ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಈಗ ವಿಶ್ವದಾಖಲೆ ಮಾಡಿ ಹುಬ್ಬಳ್ಳಿ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದಾನೆ.
ಹೌದು, ಈ ಯುವಕನ ಹೆಸರು, ಅಶ್ವಿನ್ ಶೆಟ್ಟಿಯಾರ. ಮೂಲತಃ ಹುಬ್ಬಳ್ಳಿ ನಿವಾಸಿ. ಚಿಕ್ಕ ವಯಸ್ಸಿನಲ್ಲೇ ವಿವಿಧ ಕರಾಟೆ ವಿಭಾಗದಲ್ಲಿ ಸಾಧನೆ ಮಾಡಿರುವ ಈತ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಸ್ಥಳೀಯ ಮಟ್ಟದಿಂದ ಹಿಡಿದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಬ್ಲ್ಯಾಕ್ ಬೆಲ್ಟ್, ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿ ಈಗ ಮತ್ತೊಂದು ಸಾಧನೆ ಮಾಡಿದ್ದಾನೆ. ಮಾರ್ಷಲ್ ಆರ್ಟ್ ಎಂಬ ಸ್ಪರ್ಧೆಯಲ್ಲಿ ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದಿದ್ದಾರೆ. ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ಚಿಕ್ಕ ವಯಸ್ಸಿನಿಂದಲೇ ಕರಾಟೆ ಪಟು ಆಗಿರುವ ಅಶ್ವಿನ್, ದಿನಕ್ಕೆ ಮೂರ್ನಾಲ್ಕು ಗಂಟೆಗಳ ಕಾಲ ಕರಾಟೆ ಜೊತೆಗೆ ಮಾರ್ಷಲ್ ಆರ್ಟ್ ಪ್ರಾಕ್ಟೀಸ್ ಮಾಡುತ್ತಾನೆ. ಒಂದು ನಿಮಿಷದಲ್ಲಿ ಹೆಚ್ಚು ರಷ್ಯನ್ ತಿರುವುಗಳನ್ನು ಮಾಡುವ ಮೂಲಕ ಅಶ್ವಿನ್ ವಿಶ್ವದಾಖಲೆ ಮಾಡಿ ಇದೇ ವರ್ಷ ಜುಲೈ 10 ರಂದು ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾನೆ.
ಅಶ್ವಿನ್ ಸಾಧನೆಗೆ ಮನೆಯವರ ಹಾಗೂ ಮಾರ್ಗದರ್ಶಕರ ಪ್ರೋತ್ಸಾಹವೇ ಕಾರಣ ಎಂದಿರುವ ಅಶ್ವಿನ್, ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂಬುದು ಕುಟುಂಬಸ್ಥರ ಆಶಯ.