ETV Bharat / state

ಕೆಲಸ ಮಾಡುವಾಗ ಯಂತ್ರಕ್ಕೆ ಸಿಲುಕಿ ಗುಪ್ತಾಂಗಕ್ಕೆ ಗಾಯ: ಹುಬ್ಬಳ್ಳಿಯಲ್ಲಿ ವ್ಯಕ್ತಿ ನರಳಾಟ - etv bharat kannada

ಯಂತ್ರವೊಂದರ ಸಹಾಯದಿಂದ ಕೆಲಸ ಮಾಡುತ್ತಿರುವಾಗ ಏಕಾಏಕಿ ಗುಪ್ತಾಂಗಕ್ಕೆ ತಗುಲಿ, ವ್ಯಕ್ತಿ ಸ್ಥಿತಿ ಗಂಭೀರವಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

hubballi-man-seriously-injured-while-working-with-machine
ಕೆಲಸ ಮಾಡುವಾಗ ಯಂತ್ರಕ್ಕೆ ಸಿಲುಕಿ ಗುಪ್ತಾಂಗಕ್ಕೆ ಗಾಯ: ಹುಬ್ಬಳ್ಳಿಯಲ್ಲಿ ವ್ಯಕ್ತಿ ನರಳಾಟ
author img

By

Published : Oct 17, 2022, 3:15 PM IST

ಹುಬ್ಬಳ್ಳಿ: ಕೆಲಸದ ವೇಳೆ ಕೆಲವೊಮ್ಮೆ ಸ್ವಲ್ಪ ಯಾಮಾರಿದರೂ ಜೀವಕ್ಕೇ ಎರವಾಗುವಂತಹ ಅವಘಡ ಸಂಭವಿಸುತ್ತವೆ. ಅದರಲ್ಲೂ ಯಂತ್ರೋಪಕರಣಗಳೊಂದಿಗೆ ಕೆಲಸ ಮಾಡುವಾಗ ಎಷ್ಟೇ ಜಾಗರೂಕರಾಗಿದ್ದರೂ ಸಾಲದು. ಹೀಗೆ ಕೆಲಸದ ವೇಳೆ ಯಂತ್ರವು ಆಕಸ್ಮಿಕವಾಗಿ ಖಾಸಗಿ ಅಂಗಕ್ಕೆ ತಗುಲಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯ ಖಾಸಗಿ ಅಂಗದ ಮೇಲ್ಭಾಗ ಯಂತ್ರದಿಂದ ಕತ್ತರಿಸಿ ಹೋಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಯಂತ್ರವೊಂದರ ಸಹಾಯದಿಂದ ಕೆಲಸ ಮಾಡುತ್ತಿರುವಾಗ ಏಕಾಏಕಿ ಗುಪ್ತಾಂಗಕ್ಕೆ ತಾಕಿದೆ. ಆಗ ಅಂಗದ ಮೇಲ್ಭಾಗ ಕತ್ತರಿಸಿಹೋಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ನರಳಾಡುತ್ತಿರುವ ವ್ಯಕ್ತಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಹೆಂಡ್ತಿ-ಮಕ್ಕಳನ್ನು ಕತ್ತರಿಯಿಂದ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.