ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೈಲಿನ ಸಮಯ ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ - ಕಾರಟಗಿ ನಡುವಿನ ಡೈಲಿ ಎಕ್ಸ್‌ಪ್ರೆಸ್ (ಸಂಖ್ಯೆ 17303) ರೈಲು ಜುಲೈ 17ರಂದು ಇಲ್ಲಿನ ಶ್ರೀಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಿಂದ ಸಾಯಂಕಾಲ 5.20ರ (ನಿಗದಿತ ನಿರ್ಗಮನ ಸಮಯ) ಬದಲಾಗಿ ಸಾಯಂಕಾಲ 6 ಗಂಟೆಗೆ ಹೊರಡಲಿದೆ.
ವಿಜಯಪುರ - ಮಂಗಳೂರು ರೈಲು ಸೇವಾವಧಿ ವಿಸ್ತರಣೆ: ನಿತ್ಯ ಸಂಚರಿಸುವ ವಿಜಯಪುರ - ಮಂಗಳೂರು ಜಂಕ್ಷನ್ ನಡುವಿನ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲುಗಳ ಸೇವಾವಧಿಯನ್ನು ನೈಋತ್ಯ ರೈಲ್ವೆ ವಿಸ್ತರಿಸಿದೆ. ವಿಜಯಪುರ - ಮಂಗಳೂರು ಜಂಕ್ಷನ್ (ಸಂಖ್ಯೆ 07377) ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲಿನ ಸೇವೆಯನ್ನು 2022ರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. (ಈ ಮೊದಲು ದಿನಾಂಕ ಜುಲೈ 31ರವರೆಗೆ ಸಂಚರಿಸಲು ಸೂಚಿಸಲಾಗಿತ್ತು).
ಅದೇ ರೀತಿಯಾಗಿ ಮಂಗಳೂರು ಜಂಕ್ಷನ್ - ವಿಜಯಪುರ (ಸಂಖ್ಯೆ 07378) ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲಿನ ಸೇವಾವಧಿಯನ್ನೂ ಅಕ್ಟೋಬರ್ 1ರವರೆಗೆ ವಿಸ್ತರಿಸಲಾಗಿದೆ (ಈ ಮೊದಲು ದಿನಾಂಕ ಆಗಸ್ಟ್ 1ರವರೆಗೆ ಸಂಚರಿಸಲು ಸೂಚಿಸಲಾಗಿತ್ತು). ಈ ಮೇಲಿನ ರೈಲುಗಳ ಸಮಯ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ಸೇವೆಯ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿವಾದಿತ ಸ್ವಾಮಿ ನಿತ್ಯಾನಂದರ 18 ಅಡಿ ಪ್ರತಿಮೆ ಸ್ಥಾಪಿಸಿದ ಭಕ್ತ!