ಹುಬ್ಬಳ್ಳಿ: ಮನೆಯಲ್ಲಿ ಸಾಕು ನಾಯಿ ಇದ್ದರೆ ಚಿಕ್ಕಮಕ್ಕಳಿಗೆ ಅಚ್ಚುಮೆಚ್ಚು, ಮನೆಯಲ್ಲಿರುವ ಮಕ್ಕಳು ನಾಯಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವುದು ಸಹಜ. ಆದರೆ ಮನೆಯಲ್ಲಿರುವ ನಾಯಿ ಕಾಣದಿದ್ದಾಗ ಬಾಲಕನೊಬ್ಬ ನಾಯಿ ಹುಡುಕಿಕೊಡುವಂತೆ ವಿನೂತನವಾಗಿ ಮನವಿ ಮಾಡಿದ್ದಾನೆ.
ಅಣ್ಣಿಗೇರಿ ಪಟ್ಟಣದ ಶಾರದಾ ಕಾಲೋನಿಯ ವಿರೇಶ್ ಹೊಂಬಳಮಠ ಎಂಬ ಬಾಲಕನ ನಾಯಿ ಮರಿ ಏಕಾಏಕಿ ಕಾಣೆಯಾಗಿದೆ. ನಾಯಿ ಮರಿ ಹುಡುಕಿ ಕೊಡುವಂತೆ ಸಾಮಾಜಿಕ ಜಾಲತಾಣದ ಮೊರೆಹೋಗಿದ್ದು, ಧ್ವನಿ ಸಂದೇಶ ರವಾನಿಸಿದ್ದಾನೆ.
ನನ್ನ ನಾಯಿ ಮರಿ ಹುಡುಕಿಕೊಡಿ ಪ್ಲೀಸ್ ಎಂದು ಮನವಿ ಮಾಡಿಕೊಂಡಿರುವ ಬಾಲಕನ ಮನದಾಳದ ಮಾತು ನಿಜಕ್ಕೂ ಮೂಕ ನಾಯಿಯೊಂದಿಗಿನ ಬಾಂಧವ್ಯ ತೋರಿಸುತ್ತದೆ.