ETV Bharat / state

ಹು-ಧಾ ಮಹಾನಗರ ಪಾಲಿಕೆ ವಿನೂತನ ಪ್ರಯೋಗ: ಉತ್ತಮ ಕಾರ್ಯದಕ್ಷತೆಗೆ ಸಿಗಲಿದೆ "ಮಾಸಿಕ ಪುರಸ್ಕಾರ" - Hubli Dharwad municipality

ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಿಸಲು ಹು - ಧಾ ಮಹಾನಗರ ಪಾಲಿಕೆ ವಿನೂತನ ಉಪಾಯದೊಂದಿಗೆ ಹೊರಹೊಮ್ಮಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನಾಧರಿಸಿ ಅಂಕಗಳನ್ನು ನೀಡುವ ಮೂಲಕ, ಕಾರ್ಯಕ್ಷಮತೆಯನ್ನು ಅಳೆಯಲಾಗುತ್ತದೆ. ಅತಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರತಿ ತಿಂಗಳು ಉತ್ತಮ ಕಾರ್ಯನಿರ್ವಹಣೆ ತೋರಿದ ಸಿಬ್ಬಂದಿ ಎಂಬ 'ಮಾಸಿಕ ಪುರಸ್ಕಾರ' ನೀಡಲಾಗುತ್ತದೆ.

Hu-Dha City Policy Innovative Experiment: "Monthly Reward" for best performer
ಹು-ಧಾ ಮಹಾನಗರ ಪಾಲಿಕೆ ವಿನೂತನ ಪ್ರಯೋಗ: ಉತ್ತಮ ಕಾರ್ಯದಕ್ಷತೆಗೆ ಸಿಗಲಿದೆ "ಮಾಸಿಕ ಪುರಸ್ಕಾರ"
author img

By

Published : Nov 12, 2020, 12:47 PM IST

ಹುಬ್ಬಳ್ಳಿ: ಹು-ಧಾ ಮಹಾನಗರದ ಅಭಿವೃದ್ಧಿ ಜೊತೆಗೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ಮಹಾನಗರ ಪಾಲಿಕೆಯು ಇದೀಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಿಸಲು ಮುಂದಾಗಿದೆ. ‌ಅದಕ್ಕಾಗಿ ಪ್ರತಿ ತಿಂಗಳು ಉತ್ತಮ ಕಾರ್ಯನಿರ್ವಹಣೆ ತೋರಿದ ಸಿಬ್ಬಂದಿ ಎಂಬ ಪುರಸ್ಕಾರ ನೀಡಲು ಮುಂದಾಗಿದೆ.

ಹು-ಧಾ ಮಹಾನಗರ ಪಾಲಿಕೆ ವಿನೂತನ ಪ್ರಯೋಗ: ಉತ್ತಮ ಕಾರ್ಯದಕ್ಷತೆಗೆ ಸಿಗಲಿದೆ "ಮಾಸಿಕ ಪುರಸ್ಕಾರ"

ಮಹಾನಗರ ಪಾಲಿಕೆ ಮಟ್ಟದಲ್ಲಿ ವಲಯಗಳ ಸಹಾಯಕ ಆಯುಕ್ತರು, ಪರಿಸರ ಅಭಿಯಂತರರು, ಸಹಾಯಕ/ಕಿರಿಯ ಅಭಿಯಂತರರು, ಪ್ರತಿ ವಿಭಾಗಕ್ಕೆ ಒಬ್ಬರಂತೆ ಹುಬ್ಬಳ್ಳಿ ಉತ್ತರ, ದಕ್ಷಿಣ ಹಾಗೂ ಧಾರವಾಡದಲ್ಲಿ ಆರೋಗ್ಯ ನಿರೀಕ್ಷಕರು ಮತ್ತು ಮೇಲ್ವಿಚಾರಕರು(ಜಮಾದಾರರು), ಪ್ರತಿ ವಲಯ ಕಚೇರಿಗೆ ಒಬ್ಬರಂತೆ 4 ವಿಭಾಗಗಳಲ್ಲಿ ಪೌರ ಕಾರ್ಮಿಕರು, ಪ್ರತಿ ವಲಯ ಕಚೇರಿಗೆ ಒಬ್ಬ ಆಟೊ ಟಿಪ್ಪರ್ ಚಾಲಕ ಸೇರಿದಂತೆ ಒಟ್ಟು ಏಳು ವಿಭಾಗಗಳಲ್ಲಿ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ. ಆ ಮೂಲಕ ಸಿಬ್ಬಂದಿಗಳ ಕಾರ್ಯದಕ್ಷತೆ ಹೆಚ್ಚಿಸಲು ಹಾಗೂ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಉತ್ತೇಜಿಸುವ ಚಿಂತನೆಯನ್ನು ಪಾಲಿಕೆ ಕೈಗೊಂಡಿದೆ.

ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನಾಧರಿಸಿ ಅಂಕಗಳನ್ನು ನೀಡುವ ಮೂಲಕ, ಕಾರ್ಯಕ್ಷಮತೆಯನ್ನು ಅಳೆಯಲಾಗುತ್ತದೆ. ಒಟ್ಟು 100 ಅಂಕಗಳ ಪೈಕಿ, ಯಾರು ಹೆಚ್ಚು ಅಂಕ ಪಡೆಯುತ್ತಾರೊ ಅವರಿಗೆ ಪುರಸ್ಕಾರ ನೀಡಲಾಗುವುದು. ಆಯಾ ವಿಭಾಗದ ಮೇಲಧಿಕಾರಿಗಳು ಅಂಕಗಳನ್ನು ನೀಡಲಿದ್ದಾರೆ.

ಪಾಲಿಕೆಯಲ್ಲಿರುವ 2,272 ಪೌರ ಕಾರ್ಮಿಕರನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಕಸ ಗುಡಿಸುವವರು, ಮನೆ ಮನೆಗೆ ಹೋಗಿ ಕಸ ಸಂಗ್ರಹಿಸಿ ವಿಂಗಡಣೆ ಮಾಡುವವರು, ಲೋಡರ್ಸ್ ಹಾಗೂ ಇತರರು (ಔಷಧ ಸಿಂಪಡಿಸುವವರು, ಸಾರ್ವಜನಿಕ ಸ್ಥಳ ಸ್ವಚ್ಛಗೊಳಿಸುವವರು, ಸತ್ತ ಪ್ರಾಣಿಗಳನ್ನು ತೆರವುಗೊಳಿಸುವವರು, ತುರ್ತು ಕೆಲಸ ನಿರ್ವಹಣೆಗಾರರು). ಕಾರ್ಮಿಕರ ಕಾರ್ಯವೈಖರಿ ಮೇರೆಗೆ ಆರೋಗ್ಯ ನಿರೀಕ್ಷಕರು ಹಾಗೂ ವಲಯ ಆಯುಕ್ತರು ಅಂಕಗಳನ್ನು ನೀಡುತ್ತಾರೆ.

ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಷಮತೆಗೆ ಅಂಕಗಳನ್ನು ನೀಡಲು ವಿವಿಧ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಏಳು ವಿಭಾಗಗಳಿಗೂ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಪೌರ ಕಾರ್ಮಿಕರ ವಿಭಾಗದಲ್ಲಿ ಹಾಜರಾತಿ, ಸಮಯ ಪಾಲನೆ, ಮನೆಯಿಂದ ಕಸ ಸಂಗ್ರಹ, ವಿಂಗಡಣೆ, ಸಾರ್ವಜನಿಕರ ದೂರಿಗೆ ಸ್ಪಂದನೆ, ಜನರೊಂದಿಗೆ ಒಡನಾಟ, ಕರ್ತವ್ಯದ ಸಂದರ್ಭದಲ್ಲಿ ಸುರಕ್ಷಾ ಸಾಧನಗಳ ಬಳಕೆ, ಕಾರ್ಯವ್ಯಾಪ್ತಿ ಪ್ರದೇಶದ ಸ್ವಚ್ಛತೆ, ಕಾರ್ಮಿಕರ ವಿರುದ್ಧ ಸಾರ್ವಜನಿಕರ ದೂರು ಹಾಗೂ ಕರ್ತವ್ಯದಲ್ಲಿ ಹೊಸತನದ ಮಾನದಂಡಗಳನ್ನು ಆಧರಿಸಿ ಅಂಕ ನೀಡಲಾಗುತ್ತದೆ. ಅದೇ ರೀತಿ ಸಹಾಯಕ ಆಯುಕ್ತರು, ಪರಿಸರ ಇಂಜಿನಿಯರ್‌ಗಳು, ಸಹಾಯಕ/ ಕಿರಿಯ ಇಂಜಿನಿಯರ್‌ಗಳು, ಆರೋಗ್ಯ ನಿರೀಕ್ಷಕರು ಹಾಗೂ ಮೇಲ್ವಿಚಾರಕರಿಗೂ ಅವರ ಹುದ್ದೆಗೆ ಅನುಗುಣವಾದ ಮಾನದಂಡಗಳಿದ್ದು, ಸ್ವಚ್ಛ ಸರ್ವೇಕ್ಷಣ - 2021 ರ ನಿಮಿತ್ತ ಉತ್ತಮ ಕಾರ್ಯನಿರ್ವಹಣೆ ತೋರುವ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ಹಾಗೂ ಪೌರ ಕಾರ್ಮಿಕರಿಗೆ ಬಹುಮಾನ ನೀಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.