ಹುಬ್ಬಳ್ಳಿ-ಧಾರವಾಡ: ಕೊರೊನಾ ಸೋಂಕಿತ ವ್ಯಕ್ತಿಯ ಸಂಬಂಧಿಕರಿಗೆ ಹೋಂ ಕ್ವಾರಂಟೈನ್ನಲ್ಲಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಧಾರವಾಡದ ಹೊಸ ಯಲ್ಲಾಪುರದ 33 ವರ್ಷದ ಸೋಂಕಿತ ವ್ಯಕ್ತಿ ಆಸ್ಟ್ರೇಲಿಯಾ, ದುಬೈ ಹಾಗೂ ಮಸ್ಕತ್ ದೇಶವನ್ನು ಸುತ್ತಾಡಿದ್ದ. ವಿದೇಶದಿಂದ ಮರಳಿದ ನಂತರ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿ ವಿದೇಶದಿಂದ ತಂದಿದ್ದ ಗಿಫ್ಟ್ ನೀಡಿ, ಅಲ್ಲೇ ಊಟ ಮಾಡಿದ್ದಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾನೆ.
ಹೀಗಾಗಿ ನಗರದ ಗೋಕುಲ ರಸ್ತೆಯ ರಾಮಲಿಂಗೇಶ್ವರ ನಗರದಲ್ಲಿರುವ ಸೋಂಕಿತನ ಸಂಬಂಧಿಕರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯಕೀಯ ತಪಾಸಣೆ ಮಾಡಿ, ಮೂವರಿಗೆ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಿದ್ದಾರೆ. 14 ದಿನಗಳ ಕಾಲ ಮನೆಯಲ್ಲಿರುವಂತೆ ತಿಳಿಸಿ, ಸೋಂಕಿತನ ಸಂಬಂಧಿಗಳ ಕೈಗೆ ಸೀಲ್ ಹಾಕಿದ್ದಾರೆ.