ಧಾರವಾಡ: ನಿನ್ನೆ ಸುರಿದ ಗುಡುಗು ಸಹಿತ ಮಳೆಯಿಂದ ಜಿಲ್ಲೆಯ ಅಳ್ನಾವರ ತಾಲೂಕಿನ ಹೊನ್ನಾಪುರ ಗ್ರಾಮದ ಶಾಲಾನ್ ಶ್ರೀಕಾಂತ್ ಸುತಾರ ಎಂಬುವವರ ಮನೆ ಸಂಪೂರ್ಣ ಕುಸಿದಿದೆ.
ಶಾಲಾನ್ ಶ್ರೀಕಾಂತ್ ಸುತಾರ ತೀವ್ರ ಬಡತನದಲ್ಲಿದ್ದು, ಮಳೆಯಿಂದ ಮನೆ ಬಿದ್ದಿದೆ. ಇದರಿಂದ ಬಹಳ ತೊಂದರೆಯಾಗಿದೆ. ಸರ್ಕಾರ ಪರಿಹಾರ ನೀಡಬೇಕು.
ಗ್ರಾಪಂ ವತಿಯಿಂದ ಮನೆ ಮಂಜೂರು ಮಾಡಿಸಬೇಕು. ಇರೋದು ಒಂದು ಮನೆ. ಅದು ಕೂಡ ಬಿದ್ದಿರುವುದರಿಂದ ಸಂಕಷ್ಟ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.