ETV Bharat / state

'ಐಟಿ, ಇಡಿ ಮತ್ತು ಸಿಬಿಐ ಬಿಜೆಪಿ ಅಸ್ತ್ರ': ಹುಬ್ಬಳ್ಳಿಯಲ್ಲಿ ಹಿಮಾಚಲ ಪ್ರದೇಶ ಸಿಎಂ

ಹುಬ್ಬಳ್ಳಿಯಲ್ಲಿ ಇಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

sukhwinder
ಸುಖವಿಂದರ್ ಸಿಂಗ್
author img

By

Published : May 7, 2023, 1:30 PM IST

Updated : May 7, 2023, 1:54 PM IST

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್

ಹುಬ್ಬಳ್ಳಿ: ಐಟಿ, ಇಡಿ ಹಾಗೂ ಸಿಬಿಐಗಳು ಬಿಜೆಪಿಯ ಅಸ್ತ್ರಗಳಾಗಿವೆ. ಇವುಗಳನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರ ಮತ್ತು ಬೆಂಬಲಿಗರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಬಿಜೆಪಿ ವಿರುದ್ಧ ಗುಡುಗಿದರು.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಐಟಿ, ಇಡಿಗಳು ರಾಜನೀತಿಯ ಅಸ್ತ್ರಗಳಾಗಿವೆ. ಚುನಾವಣೆ ಬಂದಾಗ ಈ ಅಸ್ತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇವಲ ಕಾಂಗ್ರೆಸ್ ಪಕ್ಷವೊಂದೇ ಅಲ್ಲ. ಪ್ರತಿಪಕ್ಷಗಳೇ ಬಿಜೆಪಿಯ ಟಾರ್ಗೆಟ್. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಅಲ್ಲಿ ಈ ರೀತಿಯ ಅಸ್ತ್ರಗಳನ್ನು ಬಳಸುತ್ತಿದೆ. ಪ್ರತಿಪಕ್ಷಗಳನ್ನು ಬಗ್ಗು ಬಡಿಯಲು ಯತ್ನಿಸ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಸರ್ಕಾರವನ್ನು ಬದಲಾಯಿಸಲು ಜನ ಉತ್ಸುಕರಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಕೊಟ್ಟ ಭರವಸೆ ಬಿಜೆಪಿ ಈಡೇರಿಸಿಲ್ಲ. ಹೇಳಿದ್ದನ್ನು ಬಿಜೆಪಿ ಮಾಡಿ ತೋರಿಸಿಲ್ಲ. ಹಿಮಾಚಲ ಪ್ರದೇಶದಲ್ಲಿ ನಾವು 10 ಗ್ಯಾರಂಟಿ ಕೊಟ್ಟಿದ್ದೆವು. ಈ ಪೈಕಿ ದೊಡ್ಡ ಗ್ಯಾರಂಟಿ ಒಪಿಎಸ್ ಜಾರಿಗೆ ತಂದೆವು. ಮೊದಲ ಸಂಪುಟದಲ್ಲಿಯೇ ಜಾರಿಗೆ ತಂದಿದ್ದೇವೆ ಎಂದರು.

ಹಿಮಾಚಲ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಗ್ಯಾರಂಟಿ ತಂದಿದ್ದೇವೆ‌. ಆದರೆ ಬಿಜೆಪಿ ನಾಯಕರು ಅಪಪ್ರಚಾರ ಮಾಡ್ತಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ಭರವಸೆ ಈಡೇರಿಸಿಲ್ಲ ಅಂತ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಕಳ್ಳತನ ಮಾಡೋ ಆಲೋಚನೆ ಮಾಡದ ರೀತಿಯಲ್ಲಿ ಜನ ಕಾಂಗ್ರೆಸ್​ಗೆ ಖಂಡಿತವಾಗಿಯೂ ಬೆಂಬಲ ನೀಡುತ್ತಾರೆ. ಶಾಸಕರನ್ನು ಖರೀದಿಸೋ ಯೋಚನೆ ಮಾಡದ ರೀತಿಯಲ್ಲಿ ಭರ್ಜರಿ ಬಹುಮತ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಬಜರಂಗದಳ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಜರಂಗ ಬಲಿ ನಮ್ಮ ಹೃದಯದಲ್ಲಿದ್ದಾರೆ. ಆದರೆ ನಾವು ಬಜರಂಗ ದಳದ ನಿಷೇಧ ಮಾಡ್ತಿರೋ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಬಜರಂಗದಳಕ್ಕೆ ಅವಮಾನಿಸುವ ಪಕ್ಷಕ್ಕೆ ಸೇರಿರುವ ಸವದಿಯನ್ನು ಸೋಲಿಸಿ: ಅಮಿತ್ ಶಾ ಕರೆ

ಬಜರಂಗದಳ ನಿಷೇಧದ ಭರವಸೆ ವಿವಾದದಿಂದ ಪಕ್ಷದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ತಡೆಗಟ್ಟಲು ಕಾಂಗ್ರೆಸ್​ನ ಹಿರಿಯ ಮುಖಂಡರುಗಳು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಜರಂಗದಳ ನಿಷೇಧದ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಿಂದ ಹಿಂದಕ್ಕೆ ಪಡೆಯುವುದಿಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹನುಮನ ನಾಡಿನಲ್ಲಿ ಹನುಮಾನ್ ಹೆಸರಲ್ಲಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುತ್ತದೆ. ಹಳ್ಳಿ ಹಳ್ಳಿಗಳಲ್ಲಿ ಹನುಮಂತನ ದೇವಸ್ಥಾನ ಮತ್ತು ಗರಡಿಗಳನ್ನು ಸ್ಥಾಪನೆ ಮಾಡಿ ಯುವಕರಿಗೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಪಕ್ಷವು ಮಾಡಲಿದೆ ಎಂದು ಕಾರವಾರ ಜಿಲ್ಲೆಯ ಹೊನ್ನಾವರದಲ್ಲಿ ಹೇಳಿದ್ದರು.

ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿಲ್ಲ. ಆದರೆ ಕಾನೂನು ವಿರೋಧಿ ಚಟುವಟಿಕೆಯಲ್ಲಿ ಬಾಗಿಯಾದಲ್ಲಿ ನಿಷೇಧದಂತಹ ಕ್ರಮ ತೆಗೆದುಕೊಳ್ಳಲಾಗುವುದೆಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ: ವಿಡಿಯೋ

Last Updated : May 7, 2023, 1:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.