ದಾವಣಗೆರೆ: ಪಾದಯಾತ್ರೆಯಿಂದ 2ಎ ಮೀಸಲಾತಿ ಸಮಸ್ಯೆ ಬಗೆಹರಿಯುವುದಿಲ್ಲ. ಅದರ ಬಗ್ಗೆ ಕುಳಿತು ಚರ್ಚೆ ಮಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದು ನೂತನ ಸಚಿವ ಮುರುಗೇಶ್ ನಿರಾಣಿ ಅವರು ಕೂಡಲಸಂಗಮ ಪೀಠಾಧ್ಯಕ್ಷ ಜಯಮೃತ್ಯುಂಜಯ ಶ್ರೀಗೆ ಮನವಿ ಮಾಡಿದರು.
ಜಿಲ್ಲೆಯ ಹರಿಹರ ತಾಲೂಕಿನ ಪಂಚಮಸಾಲಿ ಪೀಠದಲ್ಲಿ ನಡೆಯುತ್ತಿರುವ ಹರಜಾತ್ರೆಯ ವೇದಿಕೆಯಲ್ಲಿ ಮಾತನಾಡಿದ ಅವರು, ಕೂಡಲ ಸಂಗಮ ಶ್ರೀಗಳು ಪಾದಯಾತ್ರೆ ಕೈಬಿಡುವಂತೆ ಹೇಳಿದರು.
2ಎ ಮೀಸಲಾತಿ ನೀಡುವಲ್ಲಿ ಸರ್ಕಾರ ಸಿದ್ಧವಾಗಿದ್ದು, ಅದಕ್ಕೆ ಕಮಿಟಿ, ಸಬ್ ಕಮಿಟಿಗಳನ್ನು ಮಾಡಿ ಚರ್ಚಿಸಬೇಕಾಗಿದೆ. ಸಿಎಂ ಯಡಿಯೂರಪ್ಪನವರಿಗೆ ಪಂಚಮಸಾಲಿ ಸಮಾಜದ ಮೇಲೆ ಅಪಾರ ಪ್ರೀತಿ ಇದೆ. ಪ್ರತಿಭಟನೆ, ಇನ್ನೊಂದು ಯಾವುದನ್ನು ಮಾಡಬೇಡಿ ಎಂದರು.