ಹುಬ್ಬಳ್ಳಿ : ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವು ಜಿಲ್ಲೆಯಲ್ಲೂ ಕಾಣಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ನಗರದ ಪ್ರಮುಖ ರಸ್ತೆಗಳಲ್ಲಿ ಇಂದು ಪಥಸಂಚಲನ ಮಾಡುವ ಮೂಲಕ ನಾಗರಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿತು.
ನಗರದಲ್ಲಿ ಉತ್ತರ ಸಂಚಾರ ವಿಭಾಗದ ಎಸಿಪಿ ವಿನೋದ್ ಕುಮಾರ್ ಮುಕ್ತೇದಾರ್ ನೇತೃತ್ವದಲ್ಲಿ ಎರಡು ಮಾರ್ಗವಾಗಿ ಪಥ ಸಂಚಲನ ನಡೆಸಲಾಯಿತು.
ಒಂದು ಮಾರ್ಗ ದೇವಾಂಗಪೇಟೆ, ಸಿಲ್ವರ್‌ಪಾರ್ಕ್, ಮಸೂತಿ ಓಣಿ, ಗೋಪನಕೊಪ್ಪ, ರಮೇಶಭವನ, ಸರ್ವೋದಯ ಸರ್ಕಲ್‌ವರೆಗೆ ನಡೆಸಿದರೆ ಮತ್ತೊಂದು ಗಿರಣಿಚಾಳ, ಗವಿ ಓಣಿ, ಕೌಲಪೇಟೆ, ಡಾಕಪ್ಪಾ ಸರ್ಕಲ್, ಮುಲ್ಲಾ ಮಸೂತಿ ಓಣಿ, ಕಾಳಮ್ಮನ ಅಗಸಿ ಮಾರ್ಗವಾಗಿ ನಡೆಯಿತು. ಈ ಪಥಸಂಚಲನದಲ್ಲಿ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ಸಾಗುವ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ಪಥ ಸಂಚಲನದಲ್ಲಿ ಕೇಶ್ವಾಪುರ ಪೊಲೀಸ್ ಠಾಣೆಯ ಪಿಐ ಜಗದೀಶ್ ಹಂಚಿನಾಳ, ಅಶೋಕನಗರ ಠಾಣೆಯ ಪಿಐ ಸೋಳಂಕಿ, ಉಪನಗರ ಠಾಣೆ ಪಿಐ ಡಿ. ರವಿಚಂದ್ರನ್, ಕಮರಿಪೇಟೆ ಠಾಣೆ ಪಿಐ ಜಾದವ್ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗ ಇದ್ದರು.
ವಿಜಯಪುರದಲ್ಲಿ ಪೊಲೀಸರು ಬಿಗಿ ಭದ್ರತೆ
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನಲೆ ಗುಮ್ಮಟನಗರಿ ವಿಜಯಪುರದಲ್ಲಿ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ. ಪೊಲೀಸರಿಂದ ನಗರದಾದ್ಯಂತ ಪರೇಡ್ ನಡೆಸಲಾಯಿತು.
ಸಾರ್ವಜನಿಕರಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಖಡಕ್ ಸಂದೇಶ ರವಾನಿಸಿದರು. ವಿಜಯಪುರ ನಗರದ ಪ್ರಮುಖ ರಸ್ತೆಗಳಲ್ಲಿ
ಎಸ್ಪಿ ಹೆಚ್. ಡಿ. ಆನಂದ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಪರೇಡ್ ನಡೆಸಲಾಯಿತು.
ಪೊಲೀಸ್ ಪರೇಡ್ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಿಗೆ ಸಂದೇಶ ರವಾನೆ ಮಾಡಿದರು. ಪರೇಡ್ ನಲ್ಲಿ ನೂರಾರು ಪೊಲೀಸರು ಭಾಗಿಯಾಗಿದ್ದರು.
ರಾಜ್ಯದಲ್ಲಿ ತೀವ್ರಗೊಂಡ ಹಿಜಾಬ್ ವಿವಾದ, ಪುತ್ತೂರಿನಲ್ಲಿ ಪೊಲೀಸ್ ರೂಟ್ ಮಾರ್ಚ್..
ಪುತ್ತೂರು: ಹಿಜಾಬ್ ವಿವಾದ ರಾಜ್ಯದಲ್ಲಿ ದಿನೇ ದಿನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಇದೀಗ ಸಾರ್ವಜನಿಕರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ರೂಟ್ ಮಾರ್ಚ್ ನಡೆಸುತ್ತಿದೆ.
ಪುತ್ತೂರು ನಗರದಲ್ಲಿ ಫೆ. 11 ರಂದು ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಯಿತು. ಪುತ್ತೂರಿನ ದರ್ಬೆ ವೃತ್ತದಿಂದ ಬೊಳುವಾರು ತನಕ ಮಾರ್ಚ್ ಮಾಡಿದ ಪೊಲೀಸರು ಯಾವುದೇ ಸನ್ನಿವೇಶಕ್ಕೂ ಪೋಲೀಸರು ಸಿದ್ಧ ಎನ್ನುವುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡುವ ಉದ್ಧೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಓದಿ: ಮುಂಬೈಗೂ ಕಾಲಿಟ್ಟ ಹಿಜಾಬ್ ವಿವಾದ : ಕಾಲೇಜ್ಗಳಲ್ಲಿ ದುಪಟ್ಟಾ, ಮುಸುಕು, ಬುರ್ಖಾ ನಿಷೇಧ