ETV Bharat / state

ಹುಬ್ಬಳ್ಳಿಯಲ್ಲಿ ಕೊರೊನಾ ಪತ್ತೆ: ಹೈ ಅಲರ್ಟ್ - high alert in hubli

ಹುಬ್ಬಳ್ಳಿಯಲ್ಲಿ ಕೊರೊನಾ ಪ್ರಕರಣ ದೃಢವಾದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸೋಂಕಿತ ಪ್ರದೇಶ ಮುಲ್ಲಾ ಓಣಿಯಿಂದ 3 ಕಿ.ಮೀ. ಸುತ್ತಳತೆಯ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ನಿರ್ಮಾಣ ಮಾಡಲಾಗಿದೆ.

hbl
hbl
author img

By

Published : Apr 10, 2020, 8:56 AM IST

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ‌ ಕೊರೊನಾ ಪ್ರಕರಣ ದೃಢವಾದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಗರದ ಮುಲ್ಲಾ ಓಣಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢವಾಗಿದ್ದರಿಂದ ವಾಣಿಜ್ಯ ನಗರಿಯಲ್ಲಿ ಆತಂಕ ಆವರಿಸಿದೆ.

ಲಾಕ್ ಡೌನ್ ಇದ್ದರೂ ಸಾಮಾನ್ಯವಾಗಿ ಹುಬ್ಬಳ್ಳಿ‌ ಮಂದಿ ಓಡಾಡಿಕೊಂಡಿದ್ದರು. ನಮ್ಮಲ್ಲಿ ಸೋಕಿತರು ಇಲ್ಲ ಎಂದು ಬೀಗುತ್ತಿದ್ದರು. ಪೊಲೀಸರು, ಜಿಲ್ಲಾಡಳಿತ ಎಷ್ಟು ಹೇಳಿದರೂ ಕೊರೊನಾ ಭಯವಿಲ್ಲದೇ ರಸ್ತೆಗಿಳಿಯುತ್ತಿದ್ದರು. ಲಾಕ್ ಡೌನ್ ಪಾಲಿಸದವರಿಗೆ ಈಗ ಬರಸಿಡಿಲು‌‌ ಬಡಿದಂತಾಗಿದೆ‌. ಜಿಲ್ಲೆಯ 2ನೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಶೇ.80ರಷ್ಟು ಹುಬ್ಬಳ್ಳಿಯೇ ಡೇಂಜರ್ ಝೋನ್ ಆಗಿದೆ.

high alert in hubli
ಮುಲ್ಲಾ ಓಣಿ ಕಂಟೈನ್ಮೆಂಟ್ ಜೋನ್

2 ವಾರಗಳ ಹಿಂದೆ ಹೊಸ ಯಲ್ಲಾಪುರದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. 3 ದಿನಗಳ ಹಿಂದೆಯಷ್ಟೇ ಆತ ಗುಣಮುಖರಾಗಿದ್ದರಿಂದ ಧಾರವಾಡ ಜನರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ ಯಾಗಿರುವದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.

ಸೋಂಕಿತನಿಗೆ ದೆಹಲಿ ನಂಟು ಇದ್ದು, ಆತನ ಜತೆ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ 16 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತನ ಸಹೋದರನ ವರದಿ ಬರಬೇಕಿದೆ. ಈತ ಹಾಗೂ ಈತನ ಸಹೋದರ ದೆಹಲಿ, ಆಗ್ರಾ, ಮುಂಬೈ ಸುತ್ತಾಡಿದ್ದಾರೆ. ಫುಟ್ ವೇರ್ ಬಿಸಿನೆಸ್ ಟೂರ್ ಮೇಲೆ ಹಲವು‌ ಕಡೆ ಸುತ್ತಾಡಿರುವದು ಸಾಕಷ್ಟು ಆತಂಕವನ್ನುಂಟು ಮಾಡಿದೆ‌.

high alert in hubli
ಹುಬ್ಬಳ್ಳಿಯಲ್ಲಿ ಹೈ ಅಲರ್ಟ್

ಸೋಂಕಿತ ಪ್ರದೇಶ ಮುಲ್ಲಾ ಓಣಿಯಿಂದ 3ಕಿ.ಮೀ. ಸುತ್ತಳತೆಯ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ನಿರ್ಮಾಣ ಮಾಡಲಾಗಿದೆ. ಇದು ಹುಬ್ಬಳ್ಳಿಯ ಶೇ. 80ರಷ್ಟು ನಗರವನ್ನು ಒಳಗೊಂಡಿದೆ. ಸುಮಾರು 1,01,769 ಮನೆಗಳು ಹಾಗೂ 5,71,153 ಜನಸಂಖ್ಯೆ ಕಂಟೈನ್ಮೆಂಟ್​ಗೆ ಒಳಪಡುತ್ತವೆ. ಹೀಗಾಗಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ 7 ವಲಯ ಕಚೇರಿಗಳು ಹಾಗೂ 36 ವಾರ್ಡ್ ಸೇರಿ 500ಕ್ಕೂ ಹೆಚ್ಚು ಬಡಾವಣೆಗಳು ಹೈ ಅಲರ್ಟ್ ವ್ಯಾಪ್ತಿಗೆ ಬರುತ್ತವೆ.

ಮುಲ್ಲಾ ಓಣಿಯ ಪ್ರದೇಶದಲ್ಲಿ ಪಾಲಿಕೆ ವತಿಯಿಂದ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಗಿದೆ. ಕಂಟೈನ್ನೆಂಟ್ ವಲಯದಲ್ಲಿ ಮುಂದಿನ ಆದೇಶದವರೆಗೆ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ಕಾರ್ಯ ಮುಂದುವರೆದಿದೆ. ಮೊದಲು 1 ಕಿ.ಮೀ. ಸುತ್ತಳತೆಯ ಪ್ರದೇಶಕ್ಕೆ ಪಾಲಿಕೆ ಆದ್ಯತೆ ನೀಡಿ ಬಿಗಿ ಬಂದೋಬಸ್ತ್ ‌ಮಾಡಲಾಗಿದ್ದು, ಜನರ ಓಡಾಟ ಸ್ತಬ್ಧವಾಗಿದೆ.

ಕರ್ತವ್ಯ ನಿರತ ಹಾಗೂ ಸರಕು ಸಾಗಣಿಕೆ ವಾಹಗಳನ್ನು ಹೊರತು ಪಡಿಸಿ ಉಳಿದೆಲ್ಲ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 3 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯವರು ಆಹಾರ ಮತ್ತು ಇತರೇ ವಸ್ತುಗಳನ್ನು ವಿತರಿಸುವಂತಿಲ್ಲ. ಹೀಗಾಗಿ ‌ಇಂದಿನಿಂದ‌ ವಾಣಿಜ್ಯ ನಗರಿಯಲ್ಲಿ‌ ಲಾಕ್ ಡೌನ್ ಮತ್ತಷ್ಟು ‌ಕಠಿಣವಾಗಿದೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.