ETV Bharat / state

ಏಕಾಏಕಿಯಾಗಿ ತುಂಬಿ ಬಂದ ಬೆಣ್ಣೆ ಹಳ್ಳ.. 25ಕ್ಕೂ ಹೆಚ್ಚು ಜನರ ರಕ್ಷಣೆ - benne halla overflowing

ಹುಬ್ಬಳ್ಳಿಯ ತಾಲೂಕಿನ ಇಂಗಳಹಳ್ಳಿ ಗ್ರಾಮದ ಸುತ್ತಮುತ್ತ ಅತಿ ಹೆಚ್ಚು ಮಳೆಯಾದ ಪರಿಣಾಮ ಬೆಣ್ಣೆ ಹಳ್ಳ ತುಂಬಿ ಬಂದಿದೆ.

ಬೆಣ್ಣೆ ಹಳ್ಳದಲ್ಲಿ ಸಂತ್ರಸ್ತರ ರಕ್ಷಣೆ
ಬೆಣ್ಣೆ ಹಳ್ಳದಲ್ಲಿ ಸಂತ್ರಸ್ತರ ರಕ್ಷಣೆ
author img

By

Published : Aug 29, 2022, 5:58 PM IST

Updated : Aug 29, 2022, 8:02 PM IST

ಹುಬ್ಬಳ್ಳಿ : ಏಕಾಏಕಿಯಾಗಿ ತುಂಬಿ ಬಂದ ಬೆಣ್ಣೆ ಹಳ್ಳದ ಮಧ್ಯದಲ್ಲಿ ಸಿಲುಕಿಕೊಂಡಿದ್ದ 25ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ‌ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದ ಸುತ್ತಮುತ್ತ ಅತೀ ಹೆಚ್ಚು ಮಳೆಯಾದ ಪರಿಣಾಮ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದೆ. ಕೃಷಿ ಕೆಲಸಕ್ಕೆ ತೆರಳಿದ್ದ 25ಕ್ಕೂ ಹೆಚ್ಚು ಜನ‌ ಸಿಲುಕಿಕೊಂಡಿದ್ದರು.‌

ಬೆಣ್ಣೆ ಹಳ್ಳದಲ್ಲಿ ಸಿಲುಕಿದ ಸಂತ್ರಸ್ತರನ್ನು ರಕ್ಷಣೆ ಮಾಡಲಾಯಿತು

ವಿಷಯ ತಿಳಿಯುತ್ತಿದ್ದಂತೆ ಗ್ರಾಮೀಣ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್​ ರಮೇಶ್ ಗೋಕಾಕ್ ಮತ್ತು ತಹಶೀಲ್ದಾರ್​ ಪ್ರಕಾಶ ನಾಶಿ ಸ್ಥಳಕ್ಕೆ ದೌಡಾಯಿಸಿ 25ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಿದ್ದಾರೆ. ಇನ್ನು, ನೀರಿನಲ್ಲಿ ಕೊಚ್ಚಿಕೊಂಡು ಓರ್ವ ವ್ಯಕ್ತಿ ಹೋಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಓದಿ: ಗಣೇಶೋತ್ಸವ ಆಚರಣೆ ಕುರಿತು ನ್ಯಾಯಾಲಯದ ತೀರ್ಪನ್ನು ಒಪ್ಪಲೇಬೇಕಾಗುತ್ತದೆ: ಸಿ ಟಿ ರವಿ

Last Updated : Aug 29, 2022, 8:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.