ಧಾರವಾಡ: ತಾಲೂಕಿನ ಹನುಮನಕೊಪ್ಪ ಗ್ರಾಮದ ಗೊಂಬೆ ಭವಿಷ್ಯ ಪ್ರತಿ ವರ್ಷ ಯುಗಾದಿಯಂದು ನಡೆಯುತ್ತದೆ. ಈ ವರ್ಷ ರಾಜ್ಯ ಮತ್ತು ಕೇಂದ್ರ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಣ್ಣಿನ ಗೊಂಬೆಗಳು ತಿಳಿಸಿವೆ. ಕಳೆದ ವರ್ಷ ಬೊಂಬೆಗಳು ಸಿಎಂ ಬದಲಾವಣೆ ಮುನ್ಸೂಚಣೆ ನೀಡಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಯುಗಾದಿಯ ಅಮವಾಸ್ಯೆ ರಾತ್ರಿ ಗೊಂಬೆ ಮಾಡಿಟ್ಟು ಬರುವ ಗ್ರಾಮಸ್ಥರು ಇಂದು ಬೆಳಗಿನ ಜಾವ ಗೊಂಬೆಗಳನ್ನು ನೋಡಿ ಭವಿಷ್ಯ ನಿರ್ಧಾರ ಮಾಡುತ್ತಾರೆ. ಈ ಬಾರಿ ಮಳೆ-ಬೆಳೆ ಉತ್ತಮವಾಗಿರಲಿದೆ, ಅನ್ನ, ಆಹಾರಕ್ಕೆ ತೊಂದರೆ ಉಂಟಾಗುವುದಿಲ್ಲ. ಆದ್ರೆ ಉಳುಮೆ ಮಾಡುವ ರೈತರಿಗೆ ಸಣ್ಣಪುಟ್ಟ ಪೆಟ್ಟುಗಳು ಆಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿವೆ.
ಇದನ್ನೂ ಓದಿ: ಮಿಂಚಿನ ಸರಳುಗಳಂತೆ ಕಾಣಿಸಿಕೊಂಡ ಉಲ್ಕಾಪಾತ: ವಿಡಿಯೋ ವೈರಲ್