ETV Bharat / state

ಜಿಮ್​​-ಫಿಟ್ನೆಸ್​​​​ ಕೇಂದ್ರ ತೆರೆಯಲು ಅನುಮತಿಗೆ ಒತ್ತಾಯಿಸಿ ವಿನೂತನ ಪ್ರತಿಭಟನೆ - Gym owners protest at dharwada

ಜಿಮ್ ಸಾಮಗ್ರಿಗಳಿಗೆ ಹೂವಿನ ಹಾರ ಹಾಕಿ, ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಜಿಮ್ ಹಾಗೂ ಫಿಟ್ನೆಸ್​​​ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡುವಂತೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ವಿಶಿಷ್ಟವಾಗಿ ಪ್ರತಿಭಟಿಸಲಾಯಿತು.

Gym owners protest at  dharwada
ಜಿಮ್​​-ಫಿಟ್​ನೆಸ್​ ಕೇಂದ್ರಗಳನ್ನು ತೆರೆಯುವಂತೆ ಒತ್ತಾಯಿಸಿ ವಿಶಿಷ್ಟ ಪ್ರತಿಭಟನೆ...
author img

By

Published : Jun 19, 2020, 4:37 PM IST

ಧಾರವಾಡ: ಜಿಮ್ ಹಾಗೂ ಫಿಟ್ನೆಸ್​​​ ಕೇಂದ್ರಗಳನ್ನು ಪುನಃ ತೆರೆಯಲು ಅನುಮತಿ ‌ನೀಡಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪೂಜೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ಜಿಮ್​​-ಫಿಟ್ನೆಸ್​​​ ಕೇಂದ್ರಗಳನ್ನು ತೆರೆಯುವಂತೆ ಒತ್ತಾಯಿಸಿ ವಿನೂತನ ಪ್ರತಿಭಟನೆ
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಜಿಮ್ ಮಾಲೀಕರು, ಜಿಮ್ ಸಾಮಗ್ರಿಗಳಿಗೆ ಹೂವಿನ ಹಾರ ಹಾಕಿ, ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ದೀಪಾ ಚೋಳನ್​ ಮ‌ೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿದರು. ಕಳೆದ ಮೂರು ತಿಂಗಳಿನಿಂದ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಅಲ್ಲದೇ ಲಾಕ್​ಡೌನ್​ನಿಂದ ಹಂತ ಹಂತವಾಗಿ ವಿನಾಯ್ತಿ ನೀಡಲಾಗಿದೆ. ಅದರಂತೆಯೇ ಜಿಮ್ ಹಾಗೂ ಫಿಟ್ನೆಸ್​​​ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.