ಹುಬ್ಬಳ್ಳಿ: ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು ಎಂದು ಸಂಚಾರ ನಿಯಮಗಳೇ ಹೇಳುತ್ತವೆ. ಆದರೆ, ಶಿರಸಿ ಸಾರಿಗೆ ಡಿಪೋಗೆ ಸೇರಿದ ಏ-31 ಈ-1252 ಬಸ್ನ ಬಸ್ ಚಾಲಕ ಮೊಬೈಲ್ ಬಳಕೆ ಮಾಡುತ್ತಲೇ ಅತೀ ವೇಗವಾಗಿ ಬಸ್ ಚಲಾಯಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಇಲ್ಲಿ ಚಾಲಕ ಸ್ವಲ್ಪ ಯಾಮಾರಿದ್ರು ಕೂಡಾ 53 ಜನ ಪ್ರಯಾಣಿಕರು ಸೀದಾ ಸ್ವರ್ಗಕ್ಕೆ ಹೋಗೋದು ಗ್ಯಾರಂಟಿ. ಸಾರಿಗೆ ಸಂಸ್ಥೆ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಕರ್ತವ್ಯದ ಸಮಯದಲ್ಲಿ ಮೊಬೈಲ್ ಉಪಯೋಗಿಸಬಾರದು ಎಂಬ ನಿಯಮವಿದೆ. ಆದ್ರೂ ಕೂಡಾ ಈ ಬಸ್ನ ಚಾಲಕ ಮಾತ್ರ ಯಾವುದೇ ನಿಯಮಗಳಿಗೆ ತಲೆ ಕೆಡಿಸಿಕೊಳ್ಳದೆ ಚಲಿಸುವ ಬಸ್ನಲ್ಲಿ ಮೊಬೈಲ್ ಬಳಕೆ ಮಾತ್ತಿರುವುದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ.