ಧಾರವಾಡ: ಧಾರವಾಡದ ಶಹರ ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿ, ಸಿಡಿಪಿಐ ಕಚೇರಿಗೂ ಸಹ ಕೋವಿಡ್ ವಕ್ಕರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಶಹರ ಪೊಲೀಸ್ ಠಾಣೆ ಸಿಬ್ಬಂದಿ, ಸಿಡಿಪಿಐ ಕಚೇರಿ ಸಿಬ್ಬಂದಿ ಸೇರಿದಂತೆ ತಹಶೀಲ್ದಾರ್ ಕಚೇರಿ ಏಜೆಂಟ್‌ಗೆ ಸೋಂಕು ಕಾಣಿಸಿಕೊಂಡಿದೆ. ಶಹರ ಪೊಲೀಸ್ ಠಾಣೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ.
ತಹಶೀಲ್ದಾರ್ ಕಚೇರಿಗೆ ಸಾವಿರಾರು ಜನರು ಪಹಣಿ ಪತ್ರಕ್ಕೆ ಬರುತ್ತಿದ್ದರು. ಸೀಲ್‌ಡೌನ್ ಕಾರಣದಿಂದಾಗಿ ಜನರು ಪಹಣಿ ಪತ್ರಗಳಿಗಾಗಿ ಪರದಾಟ ನಡೆಸುವಂತಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ 465 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.