ಹುಬ್ಬಳ್ಳಿ : ಗ್ಯಾಂಗ್ರೀನ್ ರೋಗಕ್ಕೆ ತುತ್ತಾಗಿ ಅನಾರೋಗ್ಯದಿಂದ ಬಳಲಿ ತನ್ನ ಕುಟುಂಬ ನಿರ್ವಹಣೆ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿ ಪರದಾಟ ನಡೆಸಿದ್ದ ವ್ಯಕ್ತಿಯ ಅಕೌಂಟ್‌ಗೆ ದಾನಿಗಳು ನೆರವು ನೀಡಿದ್ದಾರೆ. ಇದರಿಂದ ತೃಪ್ತರಾಗಿರುವ ಆ ವ್ಯಕ್ತಿ, ತನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದದ ಜೊತೆಗೆ ನನ್ನ ಕುಟುಂಬ ನಿರ್ವಹಣೆಗೆ ಬೇಕಾಗುವಷ್ಟು ಹಣ ಬಂದಿದೆ. ಇನ್ನೂ ಮುಂದೆ ಹಣ ಯಾರೂ ಹಾಕಬೇಡಿ. ನನ್ನಂತಹ ಇನ್ನೂ ಅದೆಷ್ಟೋ ಜೀವಗಳು ಹಲವು ಸಮಸ್ಯೆಗಳಿಂದ ಬಳಲುತ್ತಿವೆ. ಅಂತಹವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ವಸಂತ ಕುಲಕರ್ಣಿ ಎಂಬುವರು ಸುಮಾರು ವರ್ಷಗಳಿಂದ ಗ್ಯಾಂಗ್ರೀನ್ ರೋಗಕ್ಕೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಟುಂಬ ನಿರ್ವಹಣೆ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿ ಪರದಾಟ ನಡೆಸಿದ್ದರು. ಇವರ ಕಷ್ಟದ ಬಗ್ಗೆ ಸವಿಸ್ತಾರವಾಗಿ ಈಟಿವಿ ಭಾರತ್ ವರದಿ ಬಿತ್ತರಿಸಿತ್ತು.
ಇವರ ಸಂಕಷ್ಟಕ್ಕೆ ಸ್ಪಂದಿಸಿ ಕರ್ನಾಟಕದ ಮೂಲೆ ಮೂಲೆಗಳಿಂದ ದಾನಿಗಳು ಸಹಾಯ ಮಾಡಿದರು. ವಂಸತ್ ಅವರ ಅಕೌಂಟ್‌ಗೆ ಲಕ್ಷಾಂತರ ರೂ. ಜಮೆಗೊಂಡಿದೆ. ದಾನಿಗಳಿಂದಾಗಿ ಇವರ ಅಕೌಂಟ್‌ಗೆ ಸದ್ಯ ಬರೋಬ್ಬರಿ ₹6.80 ಲಕ್ಷಕ್ಕೂ ಹೆಚ್ಚು ಹಣ ಜಮೆ ಆಗಿದೆ.
ಓದಿ:ಹುಬ್ಬಳ್ಳಿ: ಬಹು ಅಂಗಾಂಗ ಕಾಯಿಲೆಗಳಿಂದ ನೊಂದ ಜೀವಗಳಿಗೆ ಆಸರೆಯಾಗಬೇಕಿದೆ ದಾನಿಗಳು