ETV Bharat / state

ಶಾಲೆ ಖಾಲಿ ಮಾಡುವಂತೆ ಸೊಸೈಟಿ ಮಾಲೀಕರ ಒತ್ತಾಯ; ಮಕ್ಕಳಲ್ಲಿ ಬೇಸರ

author img

By

Published : Mar 10, 2021, 5:43 PM IST

Updated : Mar 10, 2021, 8:11 PM IST

ಹುಬ್ಬಳ್ಳಿಯ ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ ಜಾಗವನ್ನು ಖಾಲಿ ಮಾಡುವಂತೆ ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯವರು ಒತ್ತಾಯಿಸಿ ಶಾಲಾ ಪೀಠೋಪಕರಣಗಳನ್ನು ಹೊರ ಹಾಕಿದ್ದಾರೆ.

gandhiwada-co-operative-society-members-evicted-school-benches
ಶಾಲೆ ಖಾಲಿ ಮಾಡುವಂತೆ ಸೊಸೈಟಿ ಮಾಲೀಕರ ಒತ್ತಾಯ

ಹುಬ್ಬಳ್ಳಿ: ಹರಿಜನ ಸರ್ಕಾರಿ ಅನುದಾನಿತ ಶಾಲೆಯ ಜಾಗ ಸೊಸೈಟಿಗೆ ಸೇರಿದೆ. ಹೀಗಾಗಿ, ನೀವು ಜಾಗ ಖಾಲಿ ಮಾಡಲೇಬೇಕು ಎಂದು ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯವರು ಶಾಲಾ ಪೀಠೋಪಕರಣಗಳನ್ನು ಹೊರಗೆ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.

ಜ್ಞಾನ ದೇಗುಲದಿಂದ ಹೊರಗೆ ಹಾಕಿದ ಕುರಿತು ವಿದ್ಯಾರ್ಥಿನಿ ಅಳಲನ್ನು ತೋಡಿಕೊಂಡಿದ್ದಾಳೆ

1956ರಲ್ಲಿ ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆಯನ್ನು ನಗರದಲ್ಲಿ ಆರಂಭಿಸಲಾಗಿತ್ತು. ಈ ಹಿಂದೆ ಇದೇ ಜಾಗವನ್ನು ಖರೀದಿಸಿದ್ದ ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯವರು, ಅದನ್ನು ಲೇಔಟ್​ ಮಾಡಿ, ಶಾಲಾ ಕಟ್ಟಡ ನಿರ್ಮಾಣಕ್ಕೆ ಮಾರಾಟ ಮಾಡಿದ್ದರು. ಈಗ ಏಕಾಏಕಿ ಶಾಲೆಗೆ ಧಾವಿಸಿರುವ ಮಾಲೀಕರು, ಈ ಜಾಗ ಸೊಸೈಟಿಗೆ ಸೇರಿದೆ. ನೀವು ಜಾಗ ಖಾಲಿ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಸಿಡಿ ಪ್ರಕರಣ: ದೂರು ವಾಪಸ್ ಪಡೆದ ಬಳಿಕ ದಿನೇಶ್ ಕಲ್ಲಹಳ್ಳಿ ಮೊದಲ ಪ್ರತಿಕ್ರಿಯೆ

ಗಾಂಧಿವಾಡ ಸೊಸೈಟಿ ನ್ಯಾಯಾಲಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ದಾವೆ ಹೂಡಿದ್ದು, ನ್ಯಾಯಾಲಯ ಜಾಗ ಖಾಲಿ ಮಾಡುವಂತೆ ಹೇಳಿದೆ ಎಂದು ಸೊಸೈಟಿ ಸದಸ್ಯರು ಹೇಳುತ್ತಿದ್ದಾರೆ. ಆದರೆ, ಆದೇಶದಲ್ಲಿ ಶಾಲಾ ಜಾಗ ಖಾಲಿ ಮಾಡುವಂತೆ ನಮೂದಿಸಿಲ್ಲ. ಒತ್ತಾಯಪೂರ್ವಕವಾಗಿ ಪೊಲೀಸ್ ಪಡೆ ತಂದು ಖಾಲಿ ಮಾಡಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶಾಲೆ ಖಾಲಿ ಮಾಡುವಂತೆ ಸೊಸೈಟಿ ಮಾಲೀಕರ ಒತ್ತಾಯ

ಶಾಲಾ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸೊಸೈಟಿ ಸದಸ್ಯರು ಒತ್ತಾಯಪೂರ್ವಕವಾಗಿ ಪೀಠೋಪಕರಣಗಳನ್ನು ಹೊರಗೆ ಹಾಕಿದ್ದರಿಂದ ಮಕ್ಕಳ ಕಣ್ಣಂಚು ತೇವವಾಗಿತ್ತು.

Last Updated : Mar 10, 2021, 8:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.