ಧಾರವಾಡ : ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸರ್ಕಾರ ಕೊನೆಗೂ ಕುಲಪತಿಯನ್ನು ನೇಮಕ ಮಾಡಿದೆ. ನೂತನ ಕುಲಪತಿಯಾಗಿ ಡಾ. ಕೆ.ಬಿ. ಗುಡಸಿ ಅವರು ಇಂದು ಅಧಿಕಾರ ವಹಿಸಿಕೊಂಡರು.
ಸರ್ಕಾರ ಕಳೆದ ಒಂದು ವರ್ಷದಿಂದ ಕುಲಪತಿ ಹುದ್ದೆಯನ್ನು ಖಾಲಿಯೇ ಇಟ್ಟುಕೊಂಡಿತ್ತು. ಈ ಮೂಲಕ ರಾಜ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಅಸ್ತಿತ್ವದಲ್ಲಿ ಇದೆಯೋ ಅಥವಾ ಇಲ್ಲವೋ ಎನ್ನುವಂತಾಗಿತ್ತು. ಇಂದು ಕೊನೆಗೂ ಗುಡಸಿ ಅವರನ್ನು ಕುಲಪತಿಯಾಗಿ ನೇಮಕ ಮಾಡಿ ಆದೇಶ ಕೊಟ್ಟಿದೆ.
ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾಗಿದ್ದ ಡಾ. ಕೆ.ಬಿ. ಗುಡಸಿ ಅವರನ್ನು ನೇಮಕ ಮಾಡಿ ರಾಜ್ಯಪಾಲ ಹಾಗೂ ವಿವಿಯ ಕುಲಾಧಿಪತಿಯೂ ಆಗಿರುವ ವಜುಬಾಯಿ ವಾಲಾ ಅವರು ಇಂದು ಆದೇಶ ಹೊರಡಿಸಿದ್ದಾರೆ.
ಮುಂದಿನ ನಾಲ್ಕು ವರ್ಷದ ಅವಧಿಗೆ ಕವಿವಿಗೆ ಗುಡಸಿ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಇದುವರೆಗೂ ಮೂರು ಪ್ರಬಾರಿ ಕುಲಪತಿಗಳ ಬಳಿಕ ಸರ್ಕಾರ ಇದೀಗ ಖಾಯಂ ಕುಲಪತಿಯನ್ನಾಗಿ ನೇಮಿಸಿದೆ.