ETV Bharat / state

ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸಿದ್ದು ಬಹಳ ಖುಷಿ ತಂದಿದೆ : ಜಿಎಂ ಅಜಯ್‌ಕುಮಾರ್ ಸಿಂಗ್ - g m ajayakumar singh

ಲಾಕ್‌ಡೌನ್ ಸಂದರ್ಭದಲ್ಲಿ ಸಮಯವನ್ನು ಸದ್ಬಳಕೆ ಮಾಡಿಕೊಂಡ ನೈಋತ್ಯ ರೈಲ್ವೆ ಹಲವು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿದೆ. ಅಲ್ಲದೇ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್‌ಫಾರಂ ಎಂಬ ಹೆಗ್ಗಳಿಕೆಯಿರುವ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ನಿಲ್ದಾಣ ವಿಶ್ವಮಾನ್ಯತೆ ಪಡೆದಿದ್ದು, ಗಿನ್ನಿಸ್ ದಾಖಲೆ ಸೇರಲಿದೆ..

g m ajayakumar singh opinion on hubli railway
ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸಿದ್ದು ಬಹಳ ಖುಷಿ ತಂದಿದೆ: ಜಿಎಂ ಅಜಯಕುಮಾರ್ ಸಿಂಗ್
author img

By

Published : Mar 30, 2021, 8:01 PM IST

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವುದು ನಿಜಕ್ಕೂ ಮನಸ್ಸಿಗೆ ಖುಷಿ ತಂದಿದೆ. ಇಲ್ಲಿನ ಸಿಬ್ಬಂದಿಯ ಸಹಭಾಗಿತ್ವದೊಂದಿಗೆ ನಾನು ಸಂತೋಷದಿಂದ ಕರ್ತವ್ಯ ನಿರ್ವಹಿದ್ದು ಬಹಳ ಖುಷಿಯ ವಿಚಾರ ಎಂದು ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರಾದ ಅಜಯಕುಮಾರ್ ಸಿಂಗ್ ಹೇಳಿದರು.

ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರಾದ ಅಜಯಕುಮಾರ್ ಸಿಂಗ್

ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲು ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಅಕ್ಟೋಬರ್ ತಿಂಗಳಿನಲ್ಲಿ ಹುಬ್ಬಳ್ಳಿಗೆ ವ್ಯವಸ್ಥಾಪಕ ನಿರ್ದೇಶಕನಾಗಿ ಬಂದೆ. ಸುಮಾರು ಎರಡು ವರ್ಷ ಐದು ತಿಂಗಳ ಕಾಲ ನಾನು ಇಲ್ಲಿ ಸೇವೆ ಸಲ್ಲಿಸಿದ್ದೇನೆ. ಸುಮಾರು ಏಂಟು ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದರೆ, ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಿಸಿರುವುದು ಬಹಳ ಖುಷಿ ತಂದಿದೆ ಎಂದರು.

ಈಗಾಗಲೇ ನೈಋತ್ಯ ರೈಲ್ವೆ ವಲಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಸಮಯವನ್ನು ಸದ್ಬಳಕೆ ಮಾಡಿಕೊಂಡ ನೈಋತ್ಯ ರೈಲ್ವೆ ಹಲವು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿದೆ. ಅಲ್ಲದೇ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್‌ಫಾರಂ ಎಂಬ ಹೆಗ್ಗಳಿಕೆಯಿರುವ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ನಿಲ್ದಾಣ ವಿಶ್ವಮಾನ್ಯತೆ ಪಡೆದಿದ್ದು, ಗಿನ್ನಿಸ್ ದಾಖಲೆ ಸೇರಲಿದೆ ಎಂದು ಹೇಳಿದರು.

ಇದನ್ನೂ ಓದಿ: ರಾಯಚೂರು ಅಗ್ನಿಶಾಮಕ ಸಿಬ್ಬಂದಿಗೆ ನೀರಿಗಿಂತ ರಸ್ತೆಗಳದ್ದೇ ಸಮಸ್ಯೆ: ತುರ್ತು ಸೇವೆಗೆ ಬೇಕಿದೆ ದಾರಿಗಳ ಅಭಿವೃದ್ಧಿ

ಈ ಮೊದಲು ಐದು ಪ್ಲಾಟ್ ಫಾರಂಗಳು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿದ್ದವು. ಈಗ ಎಂಟು ಪ್ಲಾಟ್‌ಫಾರಂಗಳಾಗಿ ಅಭಿವೃದ್ಧಿ ಮಾಡಲಾಗಿದೆ. ಅಲ್ಲದೇ ಈಗಾಗಲೇ ಎರಡು ಪ್ರಮುಖ ದ್ವಾರ ಮಾಡಲಾಗಿದೆ. ಮೂರು ದ್ವಾರ ನಿರ್ಮಾಣದ ಪ್ರಸ್ತಾವನೆ ಕೈಗೆತ್ತಿಕೊಂಡಿದೆ.

ಕೇಂದ್ರ ಸರ್ಕಾರದ ನೆರವು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತದ ಕಾರ್ಯವೈಖರಿಯಿಂದ ಸಾಕಷ್ಟು ಅನುದಾನ ನೈಋತ್ಯ ರೈಲ್ವೆಗೆ ಬಂದಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯವನ್ನು ಮಾಡಲು ಸಾಧ್ಯವಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.